ಮನೆ ರಾಷ್ಟ್ರೀಯ ಪಂಜಾಬ್ ಗಡಿಯೊಳಗೆ ನುಸುಳಿದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್’ಎಫ್

ಪಂಜಾಬ್ ಗಡಿಯೊಳಗೆ ನುಸುಳಿದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್’ಎಫ್

0

ನವದಹೆಲಿ: ಭಾರತದ ಗಡಿಯೊಳಗೆ ನುಸುಳಿದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌’ಎಫ್) ಹೊಡೆದುರುಳಿಸಿದೆ.

ಅಂತರರಾಷ್ಟ್ರೀಯ ಗಡಿಯಲ್ಲಿ (ಐಡಿ) ಪಾಕಿಸ್ತಾನದ ಭೂಪ್ರದೇಶದಲ್ಲಿ ಡ್ರೋನ್ ಪತನಗೊಂಡಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ಪಂಜಾಬ್‌’ನ ಅಮೃತಸರ ಸೆಕ್ಟರ್‌’ನ ಬಾಬಾಪೀರ್ ಗಡಿ ಪೋಸ್ಟ್ ಬಳಿ ಮಂಗಳವಾರ ಮಧ್ಯರಾತ್ರಿ ಘಟನೆ ನಡೆದಿದೆ.

ಡ್ರೋನ್ ದಾಳಿ ತಡೆಗಟ್ಟಲು ಬಿಎಸ್‌’ಎಫ್ ಸನ್ನದ್ಧವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಗಡಿಯೊಳಗೆ ನುಸುಳಿದ ಡ್ರೋನ್ ಮೇಲೆ ಬಿಎಸ್‌’ಎಫ್ ಗುಂಡು ಹಾರಿಸಿದೆ ಎಂದು ತಿಳಿಸಿದ್ದಾರೆ.