ಮನೆ ರಾಜಕೀಯ ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯ ದಿವ್ಯ ರಾಣೆ, ಕಾಂಗ್ರೆಸ್​ನ ದಿಗಂಬರ್ ಕಾಮತ್​ಗೆ ಗೆಲುವು

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯ ದಿವ್ಯ ರಾಣೆ, ಕಾಂಗ್ರೆಸ್​ನ ದಿಗಂಬರ್ ಕಾಮತ್​ಗೆ ಗೆಲುವು

0

ಗೋವಾ: ವಿಧಾನಸಭಾ ಚುನಾವಣೆ ಮತ ಎಣಿಕೆ ಗೋವಾದಲ್ಲಿ ನಡೆಯುತ್ತಿದ್ದು, ಪರ್ಯಾನ್ ಕ್ಷೇತ್ರದಿಂದ ಬಿಜೆಪಿಯ ದಿವ್ಯಾ ರಾಣೆ, ಮಡಗಾಂವ್ ಕ್ಷೇತ್ರದಿಂದ ಕಾಂಗ್ರೆಸ್​ನ ದಿಗಂಬರ್ ಕಾಮತ್ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರ ಅಳಿಯನಾದ ಬಿಜೆಪಿ ಅಭ್ಯರ್ಥಿ ಡಾ.ದಿವ್ಯ ರಾಣೆ ಅವರು ವಾಲ್ಪೈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈಗ ಗೆಲುವಿನ ಸಂತಸಲ್ಲಿರುವ ಅವರು ಪ್ರತಾಪ್ ಸಿಂಗ್ ರಾಣೆ ಕಾರಣ ಎಂದು ಹೇಳಿದ್ದಾರೆ. ಸವರ್ಡೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಣೇಶ್ ಗಾಂವ್ಕರ್ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸ್ವತಂತ್ರ ಅಭ್ಯರ್ಥಿ ದೀಪಕ್ ಪಾವಸ್ಕರ್ ಅವರು ಸೋತಿದ್ದಾರೆ.ಗೋವಾದ ಉಪಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಮನೋಹರ್ ಅಗ್ನಾವಾಂಕರ್ ಸೋಲು ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.