ಮನೆ ದೇವರ ನಾಮ ಪಾರ್ವತಿಪುತ್ರ ಪಾವನಗಾತ್ರ

ಪಾರ್ವತಿಪುತ್ರ ಪಾವನಗಾತ್ರ

0

ಪಾರ್ವತಿಪುತ್ರ ಪಾವನಗಾತ್ರ

ಪೂತಚರಿತ್ರ ಪಾಲಯಮಾಂ ||

ಸುಖ ದುಖಃಗಳಲಿ ಸಖ ನೀನಾಗಿರು||೨||

ಕರಿಮುಖ ಸುಮುಖ ಪಾಲಯಮಾಂ ||

ಪುರುಷಾರ್ಥಗಳನು ಹರುಷದಿ ಕರುಣಿಪ

ಹೇ ವೈಷ್ಣವಾಗ್ರಣಿ ಪಾಲಯಮಾಂ||

ಅರಿಷಢ್ವರ್ಗದ ಪರಿತಾಪ ಕಳೆಯೋ

ಹರಸುತ ಗಣಪ ಪಾಲಯಮಾಂ ||

ಧರ್ಮದಿ ನಡೆಸೈ ನಿರ್ಮಲ ಚರಿತ

ಕರ್ಮಜದೈವ ಪಾಲಯಮಾಂ ||

ಜ್ಞಾನ ಭಕುತಿಯು ನಿನ್ನಾಧೀನವು

ಪಾರ್ವತಿಪುತ್ರ ಪಾಲಯಮಾಂ ||