ಮನೆ ಯೋಗಾಸನ ಈ ಯೋಗಾಸನಗಳಿಂದ ಸೌಂದರ್ಯ ಹೆಚ್ಚಾಗುತ್ತದೆ ನೋಡಿ

ಈ ಯೋಗಾಸನಗಳಿಂದ ಸೌಂದರ್ಯ ಹೆಚ್ಚಾಗುತ್ತದೆ ನೋಡಿ

0

ಯೋಗಾಸನಗಳಲ್ಲಿ ಹಲವಾರು ವಿಧಗಳಿದ್ದು, ಪ್ರತಿಯೊಬ್ಬರ ಆರೋಗ್ಯ, ದೇಹ ಪ್ರಕೃತಿಗೆ ಅನುಗುಣವಾಗಿ ಮಾಡುವಂತಹ ಯೋಗಾಸನಗಳು ಇವೆ. ಯೋಗವು ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿಯನ್ನು ನೀಡುವುದು. ಯೋಗದಿಂದ ಒತ್ತಡ ಮುಕ್ತ, ಆರೋಗ್ಯ ಮತ್ತು ಏಕಾಗ್ರತೆ ಪಡೆಯಬಹುದು.

ಇದು ದೇಹದ ಸಮತೋಲನ ಕಾಪಾಡುವುದು. ಯೋಗಾಸನದಿಂದ ಆರೋಗ್ಯದ ಜತೆಗೆ ಸೌಂದರ್ಯವನ್ನು ಕೂಡ ಕಾಪಾಡಿಕೊಂಡು ಹೋಗಬಹುದು. ಅಂತಹ ಕೆಲವೊಂದು ಯೋಗಾಸನಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಯೋನಿ ಮುದ್ರಾ

• ಸುಖಾಸನದಲ್ಲಿ ಕುಳಿತುಕೊಳ್ಳಿ

• ಕೈ ಹೆಬ್ಬೆರಳನ್ನು ಕಿವಿಗಳ ಮೇಲೆ ಇಟ್ಟುಕೊಳ್ಳಿ ಮತ್ತು ತೋರು ಬೆರಳನ್ನು ಕಣ್ಣುಗಳ ರೆಪ್ಪೆಯ ಮೇಲಿಡಿ.

• ಮಧ್ಯದ ಬೆರಳನ್ನು ಹಾಗೆ ಮೂಗಿನ ಹೊಳ್ಳೆಯ ಮೇಲಿಡಿ, ಉಂಗುರದ ಬೆರಳನ್ನು ತುಟಿಯ ಮೇಲ್ಭಾಗದಲ್ಲಿ ಮತ್ತು ಕಿರುಬೆರಳನ್ನು ಕೆಳ ತುಟಿಯ ಕೆಳಭಾಗದಲ್ಲಿ ಇಡಿ.

• ಮೊಣಕೈಗಳು ನೆಲಕ್ಕೆ ಸಮಾನಾಂತರವಾಗಿ ಇರಲಿ.

• ಈ ಮುದ್ರಾದಲ್ಲಿ ನೀವು ಉಸಿರಿನ ಕಡೆಗೆ ಏಕಾಗ್ರತೆ ವಹಿಸಿ.

• 5-10 ನಿಮಿಷ ಕಾಲ ಹಾಗೆ ಈ ಮುದ್ರೆಯಲ್ಲಿರಿ.

ಸೂಚನೆ: ಬೆರಳುಗಳಿಗೆ ಒತ್ತಡ ಹಾಕಲು ಹೋಗಬೇಡಿ.

ಯೋಗ ಮುದ್ರಾ

• ಸುಖಾಸನದಲ್ಲಿ ಕುಳಿತುಕೊಳ್ಳಿ

• ಕೈಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿ ಎಡ ಮೊಣಕೈಯನ್ನು ಬಲದ ಕೈಯಿಂದ ಹಿಡಿಯಿರಿ.

• ಉಸಿರಾಡುತ್ತಾ ಹಾಗೆ ಭುಜಗಳನ್ನು ಹಿಂದಕ್ಕೆ ಎಳೆಯಿರಿ ಮತ್ತು ಎದೆಯನ್ನು ಹಿಗ್ಗಿಸಿ.

• ಉಸಿರನ್ನು ಬಿಡುತ್ತಾ ಹಾಗೆ ಮುಂದಕ್ಕೆ ಬಾಗಿ ಮತ್ತು ಹಣೆಯನ್ನು ಬಲದ ಮೊಣಕಾಲಿಗೆ ಸ್ಪರ್ಶಿಸಿ.

• ಉಸಿರನ್ನು ಎಳೆಯುತ್ತಾ ಆರಂಭದ ಭಂಗಿಗೆ ಬನ್ನಿ.

• ಇದೇ ಭಂಗಿಯನ್ನು ಪುನರಾವರ್ತಿಸಿ ಮತ್ತು ಎಡದ ಮೊಣಕಾಲನ್ನು ಹಣೆಯಿಂದ ಸ್ಪರ್ಶಿಸಿ ಮತ್ತು ಇದರ ಬಳಿಕ ಮಧ್ಯಭಾಗದಲ್ಲಿ ಹಣೆಯನ್ನು ಇಡಿ.

ಕಪಾಲ ರಂಧ್ರ ಧೌತಿ ಯೋಗ

• ಇದು ಮುಖವನ್ನು ಫೇಶಿಯಲ್ ಮಸಾಜ್ ಮಾಡುವಂತಹ ಯೋಗಾಸನ. ಇದನ್ನು ನಿಯಮಿತವಾಗಿ ಮಾಡಿದರೆ ಆಗ ಯಾವುದೇ ರೀತಿಯ ದುಬಾರಿ ಸೌಂದರ್ಯವರ್ಧಕಗಳನ್ನು ಬಳಸಬೇಕಾಗಿಲ್ಲ.

• ಇದು ಮುಖದ ಮೇಲಿನ ಎಲ್ಲಾ ನರಗಳನ್ನು ಉತ್ತೇಜಿಸುವುದು ಮತ್ತು ಮುಖಕ್ಕೆ ನೈಸರ್ಗಿಕ ಕಾಂತಿ ಸಿಗುವುದು. ಇದು ದೇಹಕ್ಕೆ ಆರಾಮ ನೀಡಿ, ಒತ್ತಡ ತಗ್ಗಿಸುವುದು.

ವಿಧಾನ

• ನಿಧಾನವಾಗಿ ಹಣೆಗೆ ಬೆರಳುಗಳಿಂದ ಮಸಾಜ್ ಮಾಡಿಕೊಳ್ಳಿ. ಹಣೆಯ ಮಧ್ಯಭಾಗದಿಂದ ಇದನ್ನು ಆರಂಭಿಸಿ ಕೊನೆಯ ತನಕ ಮಾಡಿ.

• ಈ ವೇಳೆ ಹುಬ್ಬುಗಳನ್ನು ಹಾಗೆ ಎಳೆಯಿರಿ. ಇದನ್ನು ಮೂರು ನಾಲ್ಕು ಸಲ ಮಾಡಿ.

• ಕಣ್ಣುಗಳ ಸುತ್ತಲು ವೃತ್ತಾಕಾರದಲ್ಲಿ ಮಸಾಜ್ ಮಾಡಿ.

• ಗಲ್ಲದ ಭಾಗದಲ್ಲಿ ಹೊರಮುಖವಾಗಿ ಮಸಾಜ್ ಮಾಡಿ.

• ಮೇಲ್ಮುಖವಾಗಿ ಕುತ್ತಿಗೆಯ ಬಾಗಕ್ಕೆ ಮಸಾಜ್ ಮಾಡಿ.

ಸೂಚನೆ: ಇದಕ್ಕಾಗಿ ನೀವು ಯಾವುದೇ ಎಣ್ಣೆ ಅಥವಾ ಕ್ರೀಮ್ ಬಳಸಬೇಕಾಗಿಲ್ಲ. ಬೆರಳುಗಳಿಗೆ ಮಸಾಜ್ ಮಾಡಿಕೊಂಡರೆ ಅಷ್ಟು ಸಾಕು.

ಯೋಗಾಭ್ಯಾಸವನ್ನು ಉತ್ತೇಜಿಸುವ 5 ಬಗೆಯ ಆಯುರ್ವೇದಿಕ ಪದ್ಧತಿಗಳು

ಕಪಾಲಭಾತಿ

 • ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ.

• ಹಾಗೆ ಒತ್ತಡ ಹಾಕಿ ಉಸಿರನ್ನು ಹೊರಗೆ ಹಾಕಿ.

ಸೂಚನೆ

• ಕಪಾಲಭಾತಿಯು ಹೊಟ್ಟೆಯಿಂದ ಹೊರಗೆ ಹಾಕುವ ಉಸಿರಿಗಿಂತ ಭಿನ್ನ. ಕೇವಲ ಮೂಗಿನಿಂದ ಉಸಿರಾಡಿ ಮತ್ತು ಹೊಟ್ಟೆಯ ಬಲ ಹಾಕಬೇಡಿ. ಕಪಾಲಭಾತಿಯಿಂದ ಹಲವಾರು ಲಾಭಗಳು ಇವೆ.

ಚಕ್ರಾಸನ

• ಪಾದಗಳನ್ನು ಸ್ವಲ್ಪ ದೂರವಾಗಿಟ್ಟುಕೊಂಡು ಸಮಾನಾಂತರವಾಗಿ ಇರುವಂತೆ ನಿಂತುಕೊಳ್ಳಿ. ಕೈಗಳನ್ನು ಎದುರಿನಿಂದ ಒಂದನ್ನೊಂದು ಲಾಕ್ ಮಾಡಿ.

• ಹಾಗೆ ಕೈಗಳನ್ನು ಮೇಲಕ್ಕೆತ್ತಿ ಮತ್ತು ಹಿಂದಕ್ಕೆ ಬಗ್ಗಿ

• ಉಸಿರನ್ನು ಬಿಡುತ್ತಾ ಮುಂದಕ್ಕೆ ಬಾಗಿ ಮತ್ತು ಕೈಗಳನ್ನು ಹಿಂದಕ್ಕೆ ತನ್ನಿ. ಕೈಗಳನ್ನು ಹಿಂದಿನಿಂದ ಲಾಕ್ ಮಾಡಿ ಮತ್ತು ಇದನ್ನು ತಲೆಯ ತನಕ ತನ್ನಿ.

• ಮೊದಲಿನ ಭಂಗಿಗೆ ಬರುವ ವೇಳೆ ಉಸಿರನ್ನು ಬಿಡಿ. ಗಲ್ಲದಲ್ಲಿನ ಕೊಬ್ಬುಕಡಿಮೆ ಆಗಲು ಇದು ಸಹಕಾರಿ.

• ಇದನ್ನು ಮೂರು ಸಲ ಮಾಡಬೇಕು.

ಧನುವಕ್ರಾಸನ

• ಹೊಟ್ಟೆಯ ಮೇಲೆ ಮಲಗಿ, ಕಾಲುಗಳು ದೂರವಾಗಿರಲಿ ಮತ್ತು ಕೈಗಳನ್ನು ದೇಹದ ಬದಿಯಲ್ಲಿ ಇರಲಿ.

•  ಕಾಲುಗಳನ್ನು ಮಡಚಿಕೊಂಡು ಅದನ್ನು ಕೈಗಳಿಂದ ಹಿಡಿಯಿರಿ. ಇದೇ ವೇಳೆ ಹಿಂಗಾಲನ್ನು ಎತ್ತಿ ಮತ್ತು ಕಾಲುಗಳನ್ನು ಮೇಲಕ್ಕೆತ್ತಿ.

• ಉಸಿರನ್ನು ಎಳೆಯುತ್ತಾ ತಲೆಯನ್ನು ಮೇಲಕ್ಕೆತ್ತಿ ಮತ್ತು ಕುತ್ತಿಗೆಯು ಮೇಲ್ಮುಖವಾಗಿರಲಿ. ಈ ಭಂಗಿಯಲ್ಲಿ ಹಾಗೆ ಇರಿ.

• ಆರಂಭಿಕ ಭಂಗಿಗೆ ಬರಲು ಉಸಿರನ್ನು ಬಿಡಿ.

• ಮೂರು ಸಲ ಇದನ್ನು ಪುನರಾವರ್ತಿಸಿ

ಪಶ್ಚಿಮೋತ್ಥಾಸನ

• ನೆಲದ ಮೇಲೆ ಕುಳಿತುಕೊಂಡು ಕಾಲುಗಳನ್ನು ಮುಂದಕ್ಕ ತನ್ನಿ ಹಾಗೂ ಉಸಿರನ್ನು ಎಳೆಯಿರಿ.

• ಮೊಣಕಾಲುಗಳು ಹಾಗೆ ಬಿಗಿಯಾಗಿ ಇರಲಿ ಮತ್ತು ಇದನ್ನು ಯಾವಾಗಲೂ ಮಡಚಬೇಡಿ.

• ಉಸಿರನ್ನು ಬಿಡುತ್ತಾ ಹಾಗೆ ಮುಂದಕ್ಕೆ ಬಾಗಿಕೊಳ್ಳಿ ಮತ್ತು ಹೆಬ್ಬೆರಳನ್ನು ಹಿಡಿಯಿರಿ ಮತ್ತು ಹಣೆಯಿಂದ ಮೊಣಕಾಲನ್ನು ಸ್ಪರ್ಶಿಸಿ.

• ಈ ಭಂಗಿಯಲ್ಲಿ 10 ಸೆಕೆಂಡು ಕಾಲ ಇರಬೇಕು.

• ಉಸಿರನ್ನು ಬಿಡುತ್ತಾ ಹಾಗೆ ಮೊದಲಿನ ಸ್ಥಾನಕ್ಕೆ ಬನ್ನಿ.