ನಾಯಿ
ತಿಮ್ಮ ತನ್ನ ನಾಯಿ ಜೊತೆ ವಾಕಿಂಗ್ ಹೊರಟಿದ್ದ – ಅವನ ಗೆಳೆಯ ಸಿಕ್ಕವನು ಕೇಳಿದ –
“ಏನು ಕತ್ತೆಯ ಜೊತೆಯಲ್ಲಿ ವಾಕಿಂಗ್ ಹೊರಟಿರುವೆ…” ಅದಕ್ಕೆ ತಿಮ್ಮ ಕೇಳಿದ –
“ಏನೋ ಇದು ನಾಯಿ ಅಲ್ವಾ?”
ಅದಕ್ಕಾತ ಹೇಳಿದ – “ನಾನು ಕೇಳಿದ್ದು ನಿಮ್ಮನ್ನಲ್ಲ, ನಾಯಿಯನ್ನು…”
*****
ದಳ
ವಿಜ್ಞಾನದ ಮೇಷ್ಟ್ರ “ದಳದಲ್ಲಿ ಎಷ್ಟು ವಿಧ” ಅಂದರು
ಆಗ ತಿಮ್ಮ ಹೇಳಿದ – “ಶರತ್ ಯಾದವ್ ದಳ, ದೇವೇಗೌಡರ ದಳ ಮತ್ತು ಲಾಲುಪ್ರಸಾದ್ ದಳ ಅಂದನು..”
*****
ಕಳವು
ಶೀಲಾ :- “ರಿ ನಮ್ಮ ಮನೆ ಕೆಲಸದಾಕೆ ನಮ್ಮ ಸ್ಟೀಲ್ ತಟ್ಟೆಯನ್ನೇ ಕದ್ದಿದ್ದಾಳೆ”
ಮಂಜು :- “ಯಾವ ತಟ್ಟೆಯೋ…?”
ಶೀಲಾ :- “ಅದೇ ರೀ ನಾವು ಉಡುಪರ ಮನೆಯಿಂದ ತಂದಿದ್ದು…”