ಮನೆ ಆರೋಗ್ಯ ದೇಶದಲ್ಲಿ ಕೋರೊನಾ ಮತ್ತೆ ಏರಿಕೆ

ದೇಶದಲ್ಲಿ ಕೋರೊನಾ ಮತ್ತೆ ಏರಿಕೆ

0

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, 24 ಗಂಟೆಗಳಲ್ಲಿ 1,581 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 4,30,10,971ಕ್ಕೆ ಏರಿಕೆಯಾಗಿದೆ. ಸದ್ಯ, ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 23,913ರಷ್ಟಿದೆ. ಕೋವಿಡ್‌ನಿಂದ ಒಂದೇ ದಿನ 33 ಮಂದಿ ಸಾವಿಗೀಡಾಗಿದ್ದು, ಸೋಂಕಿನಿಂದ ಮೃತರ ಒಟ್ಟು ಸಂಖ್ಯೆ 5,16,543ಕ್ಕೆ ಜಿಗಿದಿದೆ. ಒಟ್ಟು ಸೋಂಕಿತರ ಪೈಕಿ ಶೇಕಡ 0.06 ರಷ್ಟು ಸಕ್ರಿಯ ಪ್ರಕರಣಗಳಿವೆ.