ಮನೆ ರಾಜ್ಯ ಚಾಮರಾಜ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ನಾಮಪತ್ರ ಸಲ್ಲಿಕೆ

ಚಾಮರಾಜ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ನಾಮಪತ್ರ ಸಲ್ಲಿಕೆ

0

ಮೈಸೂರು: ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಎಲ್. ನಾಗೇಂದ್ರ ಸೋಮವಾರ ನಾಮಪತ್ರ ಸಲ್ಲಿಸಿದರು.

Join Our Whatsapp Group

ಶಾಂತಲಾ ಚಿತ್ರಮಂದಿರ ಸಮೀಪದ ಗುರುರಾಘವೇಂದ್ರ ದೇವಸ್ಥಾನದ ಬಳಿಯಿಂದ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ, ಶಕ್ತಿಪ್ರದರ್ಶಿಸಿದ ಅವರು ನಂತರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದರು.

ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಅವರ ತಾಯಿ ಪುಟ್ಟಲಿಂಗಮ್ಮ , ಮುಖಂಡ ತೋಂಟದಾರ್ಯ, ಮೇಯರ್ ಶಿವಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ಇದ್ದರು.