ಮನೆ ರಾಜ್ಯ ಹಿರೇಮರಳಿ ಗ್ರಾಪಂ ಮಾಜಿ ಸದಸ್ಯನ ಅನುಮಾನಾಸ್ಪದ ಸಾವು

ಹಿರೇಮರಳಿ ಗ್ರಾಪಂ ಮಾಜಿ ಸದಸ್ಯನ ಅನುಮಾನಾಸ್ಪದ ಸಾವು

0

ಪಾಂಡವಪುರ: ತಾಲೂಕಿನ ಹಿರೇಮರಳಿ ಗ್ರಾಪಂ ಮಾಜಿ ಸದಸ್ಯರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿ ಗ್ರಾಮದ ಸಮೀಪವಿರುವ ಫ್ರೆಂಚರ ಸಮಾಧಿ ಸ್ಥಳದ ಬಳಿ ನಡೆದಿದೆ.

Join Our Whatsapp Group

ಬಳೆ ಅತ್ತಿಗುಪ್ಪೆ ಗ್ರಾಮದ ಬಿ.ಸಿ.ಲೋಕೇಶ್(50)‌ ಮೃತಪಟ್ಟವರು. 

ಭಾನುವಾರ ರಾತ್ರಿ ಸುಮಾರು 8.30 ಕ್ಕೆ ಮನೆಯಿಂದ ಹೊರಗೆ ಹೋದವರು ವಾಪಸ್‌ ಬಂದಿರಲಿಲ್ಲ. ಇಂದು ಬೆಳ್ಳಿಗ್ಗೆ ಲೋಕೇಶ್ ಶವ ಪಟ್ಟನದ ಹಾರೋಹಳ್ಳಿ ಗ್ರಾಮದ ಬಾಜುವಿನಲ್ಲಿರುವ ಫ್ರಂಚರ ಸಮಾಧಿ ಸ್ಥಳದ ಬಳಿ ಪತ್ತೆಯಾಗಿದೆ. ಶವದ ಸಮೀಪ ಲೋಕೇಶ್‌ ಅವರ ಬೈಕ್‌ ಸಹ ದೊರಕಿದೆ.

ಶವದ ಮೇಲೆ ಕೆಲವು ಗಾಯದ ಗುರುತುಗಳು ಕಂಡುಬಂದಿದೆ. ಬಹಿರ್ದೆಸೆಗೆ ಹೋಗಲು ಈ ಸ್ಥಳಕ್ಕೆ ಬಂದಿದ್ದು,  ಕಿರಿದಾದ ರಸ್ತೆಯಲ್ಲಿ ಬೈಕ್‌ನಿಂದ ಬಿದ್ದು ಗಾಯಗೊಂಡು ಮೃತಪಟ್ಟಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಪಾಂಡವಪುರ ಉಪ ವಿಭಾಗೀಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು.

ಈ ಕುರಿತು ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.