ಮನೆ ರಾಜಕೀಯ ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರ ನವರಂಗಿ ಆಟ ಜನರಿಗೆ ಗೊತ್ತು: ಪ್ರತಾಪ್ ಸಿಂಹ

ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರ ನವರಂಗಿ ಆಟ ಜನರಿಗೆ ಗೊತ್ತು: ಪ್ರತಾಪ್ ಸಿಂಹ

0

ಮೈಸೂರು: ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸಿಗರ ನವರಂಗಿ ಆಟ ಜನರಿಗೆ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರಕಾರ ರಚನೆ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

Join Our Whatsapp Group

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ಬ್ಯಾನ್ ವಿಚಾರ ‘ಶಿವನ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿವರ್ತನೆ ಮಾಡಿದ ಡಿಕೆ ಶಿವಕುಮಾರ್ ಹನುಮಂತನ ಜನ್ಮ ದಿನವನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯರಿಂದ ಬೇರೇನೂ ನಿರೀಕ್ಷೆ ಸಾಧ್ಯ ಎಂದಿದ್ದಾರೆ.

ಮುಂದೆ ರಾಜ್ಯದಲ್ಲಿ ಘಜ್ನಿ ಮಹಮದ್, ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಪಠ್ಯ ಬರುತ್ತದೆ. ಪಿಎಫ್​’ಐ ಸತ್ತ ಹಾವು ಪಿಎಫ್’​ಐ ಬ್ಯಾನ್ ತೆಗೆದು ಭಜರಂಗದಳ ಬ್ಯಾನ್ ಮಾಡುತ್ತಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನವರಂಗಿ ಆಟ ಆಡುತ್ತಿದ್ದಾರೆ. ಸೀತೆ ಹುಡುಕಿಕೊಂಡು ಹೋದ ಭಜರಂಗಿ, ರಾಮನಿಗಾಗಿ ಪರ್ವತವನ್ನೆ ಎತ್ತಿ ಕೊಂಡು ಬಂದ. ಕರ್ನಾಟಕದ ಭಜರಂಗಿಗಳು ಹಿಂದೂತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್’​ನ್ನು ಹಾಕಿ ಹೊಸಕಿ ಹಾಕುತ್ತಾರೆ. ಕಾಂಗ್ರೆಸ್‌’ನವರು ಎಚ್ಚರಿಕೆಯಿಂದ ಮಾತನಾಡಿ ಎಂದರು.

ರಾಮನ ಮೇಲೆ ಹನುಮಂತನ ಮೇಲೆ ಯಾಕೆ ಕಾಂಗ್ರೆಸಿಗರಿಗೆ ಯಾಕಿಷ್ಟು ಕೋಪ?, ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರಕಾರ ರಚನೆ ಆಗಲ್ಲ. ಬದಲಾಗಿ ತಾಲಿಬಾನ್ ಸರಕಾರ ರಚನೆ ಆಗುತ್ತದೆ. ಅಕ್ರಮವಾಗಿ ಮುಸ್ಲಿಂರಿಗೆ ಮೀಸಲಾತಿ ಕೊಡಲಾಗುತ್ತಿತ್ತು. ಅದನ್ನ ನಾವು ತೆಗೆದಿದ್ದೇವೆ. ಕಾಂಗ್ರೆಸಿಗರು ಐತಿಹಾಸಿಕ ಅನ್ಯಾಯ ಮಾಡಿದ್ದರು ನಾವು ನ್ಯಾಯ ನೀಡಿದ್ದೇವೆ. ಭಜರಂಗದಳದವರು ಯಾವ ಅಪಹರಣ ಮಾಡಿದ್ದಾರೆ?, ಯಾರನ್ನು ಕೊಲೆ ಮಾಡಿದ್ದಾರೆ?, ಅಶಾಂತಿ ಕದಡುವ ಕೆಲಸವೇನಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಪಿಎಫ್’​ಐ, ಕೆಎಫ್​’ಡಿ ಸಂಘಟನೆ ಮೇಲೆ ನೂರಾರು ಕ್ರಿಮಿನಲ್ ಕೇಸ್ ಇವೆ. ಅವರಿಗೂ ಇವರಿಗೂ ಯಾವ ಹೋಲಿಕೆ? ಭಜರಂಗದಳದವರು ಗೋಮಾತೆ ರಕ್ಷಣೆಗೆ, ಹಿಂದುತ್ವದ ರಕ್ಷಣೆಗೆ, ಕರ್ನಾಟಕದ ಹಿತ ರಕ್ಷಣೆಗೆ ಭಜರಂಗದಳ ಹೋರಾಟ ಮಾಡಿದ್ದಾರೆ. ತಾಲಿಬಾನ್ ಸರ್ಕಾರ ಬಂದರೆ ಹಿಂದೂ ಸಂಘಟನೆಗಳಿಗೆ ಮಾತ್ರವಲ್ಲ ಹಿಂದೂಗಳಿಗೆ, ಹಿಂದೂತ್ವಕ್ಕೆ ಉಳಿಗಾಲ ಇರಲ್ಲ. ರಾಮನ ಆದರ್ಶ ಪಾಲಿಸುವ ಯಾರಿಗೂ ಉಳಿಗಾಲವಿಲ್ಲವೆಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಹೇಳಿದರು.