ಮನೆ ಕ್ರೀಡೆ ಆರ್’ಸಿಬಿಗೆ ಮುಂದಿನ ಪಂದ್ಯ ಯಾವಾಗ?, ಯಾವ ತಂಡದ ವಿರುದ್ಧ?: ಇಲ್ಲಿದೆ ಮಾಹಿತಿ

ಆರ್’ಸಿಬಿಗೆ ಮುಂದಿನ ಪಂದ್ಯ ಯಾವಾಗ?, ಯಾವ ತಂಡದ ವಿರುದ್ಧ?: ಇಲ್ಲಿದೆ ಮಾಹಿತಿ

0

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಒಂದು ತಂಡದ ಸೋಲು-ಗೆಲುವಿನ ಲೆಕ್ಕಚಾರ ಮತ್ತೊಂದು ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ 200+ ರನ್​ಗಳ ಟಾರ್ಗೆಟ್ ನೀಡಿದರೂ ಸುಲಭವಾಗಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸುತ್ತಿದೆ. ಹೀಗಾಗಿ ಮುಂಬರುವ ಪಂದ್ಯಗಳು ಸಾಕಷ್ಟು ಪ್ರಾಮುಖ್ಯತೆ ಪಡೆದಿವೆ.

Join Our Whatsapp Group

ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಟೇಬಲ್’​ನಲ್ಲಿ ಐದನೇ ಸ್ಥಾನದಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದು ಗೆಲುವು, ನಾಲ್ಕು ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್’​ರೇಟ್ ಹೊಂದಿದೆ.

ಅಂಕಪಟ್ಟಿಯಲ್ಲಿ ಮಧ್ಯದಲ್ಲಿರುವ ಆ’ರ್’​ಸಿಬಿಗೆ ಮುಂದಿನ ಪಂದ್ಯ ಮಹತ್ವದ್ದಾಗಿದೆ. ರನ್’​ರೇಟ್​ ಅನ್ನು + ಮಾಡಿಸಿಕೊಂಡು ಮುಂದೆ ಸಾಗಬೇಕಾದ ಒತ್ತಡಕ್ಕೆ ಸಿಲುಕಿದೆ.

ಆರ್’​ಸಿಬಿ ತಂಡದ ಮುಂದಿನ ಎದುರಾಳಿ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ. ಈ ಪಂದ್ಯ ಮೇ 6 ಶನಿವಾರದಂದು ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಮ್ಯಾಚ್ ಆಯೋಜಿಸಲಾಗಿದ್ದು, ಸಂಜೆ 7:30ಕ್ಕೆ ಶುರುವಾಗಲಿದೆ.

ಡೆಲ್ಲಿ ಪಾಯಿಂಟ್ಸ್ ಟೇಬಲ್​’ನಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳ ಪೈಕಿ ಕೇವಲ ಮೂರರಲ್ಲಷ್ಟೆ ಜಯ ಸಾಧಿಸಿ 6 ಅಂಕ ಸಂಪಾದಿಸಿ -0.768 ರನ್​ರೇಟ್ ಹೊಂದಿದೆ.

ಅಂಕಪಟ್ಟಿಯಲ್ಲಿ ಮೇಲೇರಲು ಉಭಯ ತಂಡಗಳಿಗೆ ಮುಂದಿನ ಪಂದ್ಯ ಬಹುಮುಖ್ಯವಾಗಿದೆ. ಆರ್​ಸಿಬಿಗೆ ಉಳಿದಿರುವುದು ಕೇವಲ ಐದು ಪಂದ್ಯ ಮಾತ್ರ. ಇದರಲ್ಲಿ ಕನಿಷ್ಠ ನಾಲ್ಕು ಪಂದ್ಯಗಳನ್ನು ಗೆಲ್ಲಲೇ ಬೇಕು.

ರಾಯಲ್ ಚಾಲೆಂಜರ್ಸ್ ಬೌಲಿಂಗ್ ವಿಭಾಗ ಬಲಿಷ್ಠ ಆಗಿರುವುದು ಸಂತಸದ ಸಂಗತಿ. ಜೋಶ್ ಹೇಜ್ಲೆವುಡ್ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಸ್ಪಿನ್ ವಿಭಾಗ ಕೂಡ ಬಲಿಷ್ಠವಾಗಿದೆ. ಬ್ಯಾಟಿಂಗ್​ನಲ್ಲಿ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್ ​ವೆಲ್ ಬಿಟ್ಟರೆ ಉಳಿದವರು ಯಾರೂ ಅಬ್ಬರಿಸುತ್ತಿಲ್ಲ.