ಅದು ಸರಿ
ಇಬ್ಬರು ಅಂಗನವಾಡಿ ಮಕ್ಕಳ ಮಾತಾಡಿಕೊಳ್ಳುತ್ತಾ ಇದ್ದವು.
ಶೀಲಾ : “ನಮ್ಮ ಮನೆಯ ಚಂದ”
ಮಾಲಾ : “ಇಲ್ಲ ನಮ್ಮ ಮನೆನೇ ಚಂದ”
ಶೀಲಾ : “ನಮ್ಮ ಮನೆ ನಾಯಿಯೇ ಚಂದಾಗಿರುವುದು.”
ಮಾಲಾ : “ಇಲ್ಲ ನಮ್ಮ ಮನೆ ನಾಯಿಯೇ ಚೆನ್ನಾಗಿರುವುದು.”
ಶೀಲಾ : “ನಮ್ಮ ಮೊಮ್ಮಿನೇ ಚಂದ”
ಮಾಲಾ : “ಅದು ಮಾತ್ರ ಸತ್ಯ. ಯಾಕೆಂದರೆ ನಮ್ಮಪ್ಪ ಯಾವಾಗಲೂ ಹೇಳ್ತಾ ಇರ್‍ತಾರೆ…”
*****
ವಾಪಾಸು
ಗುಂಡ ಹೇಳಿದ “ಸ್ವಾಮಿ ನೀವು ಕೊಟ್ಟ ಚೆಕ್ ವಾಪಾಸ್ ಬಂದಿದೆ…” ಅದಕ್ಕವನು ಹೇಳಿದ.
“ನೀವು ವಾಸಿ ಮಾಡಿದ ಜ್ವರವು ವಾಪಾಸು ಬಂದಿದೆ.”
*****
ಕತ್ತೆ
ಮೇಷ್ಟ್ರು : “ಒಂದು ಪಾತ್ರೆಯಲ್ಲಿ ಸಾರಾಯಿ ಮತ್ತೊಂದು ಪಾತ್ರೆಯಲ್ಲಿ ನೀರು ಇಟ್ಟರೆ ಕತ್ತೆ ಯಾವುದನ್ನು ಕುಡಿಯುತ್ತದೆ?”
ತಿಮ್ಮ : “ನೀರನ್ನು”
ಮೇಷ್ಟ್ರು : “ಯಾಕೆ?”
ತಿಮ್ಮ : “ಅದು ಕತ್ತೆಯಲ್ಲವಾ ಸಾರ್.”