ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಅದು ಸರಿ

ಇಬ್ಬರು ಅಂಗನವಾಡಿ ಮಕ್ಕಳ ಮಾತಾಡಿಕೊಳ್ಳುತ್ತಾ ಇದ್ದವು.

ಶೀಲಾ : “ನಮ್ಮ ಮನೆಯ ಚಂದ”

ಮಾಲಾ : “ಇಲ್ಲ ನಮ್ಮ ಮನೆನೇ ಚಂದ”

ಶೀಲಾ : “ನಮ್ಮ ಮನೆ ನಾಯಿಯೇ ಚಂದಾಗಿರುವುದು.”

ಮಾಲಾ : “ಇಲ್ಲ ನಮ್ಮ ಮನೆ ನಾಯಿಯೇ ಚೆನ್ನಾಗಿರುವುದು.”

ಶೀಲಾ : “ನಮ್ಮ ಮೊಮ್ಮಿನೇ ಚಂದ”

ಮಾಲಾ : “ಅದು ಮಾತ್ರ ಸತ್ಯ. ಯಾಕೆಂದರೆ ನಮ್ಮಪ್ಪ ಯಾವಾಗಲೂ ಹೇಳ್ತಾ ಇರ್‍ತಾರೆ…”

Join Our Whatsapp Group

*****

ವಾಪಾಸು

ಗುಂಡ ಹೇಳಿದ “ಸ್ವಾಮಿ ನೀವು ಕೊಟ್ಟ ಚೆಕ್ ವಾಪಾಸ್ ಬಂದಿದೆ…” ಅದಕ್ಕವನು ಹೇಳಿದ.

 “ನೀವು ವಾಸಿ ಮಾಡಿದ ಜ್ವರವು ವಾಪಾಸು ಬಂದಿದೆ.”

*****

ಕತ್ತೆ

ಮೇಷ್ಟ್ರು : “ಒಂದು ಪಾತ್ರೆಯಲ್ಲಿ ಸಾರಾಯಿ ಮತ್ತೊಂದು ಪಾತ್ರೆಯಲ್ಲಿ ನೀರು ಇಟ್ಟರೆ ಕತ್ತೆ ಯಾವುದನ್ನು ಕುಡಿಯುತ್ತದೆ?”

ತಿಮ್ಮ : “ನೀರನ್ನು”

ಮೇಷ್ಟ್ರು : “ಯಾಕೆ?”

ತಿಮ್ಮ : “ಅದು ಕತ್ತೆಯಲ್ಲವಾ ಸಾರ್.”

ಹಿಂದಿನ ಲೇಖನಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಹೆಚ್.ಡಿ ಕುಮಾರಸ್ವಾಮಿ
ಮುಂದಿನ ಲೇಖನಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್ ಸ್ಟರ್ ಅನಿಲ್ ದುಜಾನಾ ಎನ್ ಕೌಂಟರ್