ಮಗಳು: ಕಾಗೆ ಕೂಗಿದರೆ ಮನೆಗೆ ನೆಂಟರು ಬರ್ತಾರಂತೆ, ಹೌದಾ ಅಪ್ಪಾ..
ತಂದೆ: ಹೌದು, ಮಗಳೇ..
ಮಗಳು: ಹಾಗಾದ್ರೆ, ಬಂದ ನೆಂಟರು ವಾಪಸ್ ಹೋಗೋಕೆ ಏನು ಮಾಡಬೇಕು?
ತಂದೆ: ನಿನ್ನ ಅಮ್ಮ ಕೂಗಿದರೆ ಸಾಕು..
*****
ಸೊಸೆ ಬಲಗಾಲಿಟ್ಟು ಮೊದಲ ಬಾರಿಗೆ ಗಂಡನ ಮನೆಗೆ ಬರುತ್ತಾಳೆ. ಸೊಸೆ ಬರುತ್ತಿದ್ದಂತೆಯೇ ಅತ್ತೆಯ ವ್ಯಂಗ್ಯ ಶುರುವಾಗುತ್ತದೆ..
ಅತ್ತೆ: ನೋಡಮ್ಮ.. ನಾನು ಈ ಮನೆಯ ಗೃಹ ಸಚಿವೆ, ನಿನ್ ಮಾವ ಹಣಕಾಸು ಸಚಿವ, ನಿನ್ನ ನಾದಿನಿ ಸಾಮಾಜಿಕ ಅಭಿವೃದ್ದಿ ಸಚಿವೆ..
ಸೊಸೆ: ಆಯ್ತು ಅತ್ತೆ.. ಹಾಗಾದರೆ ನನ್ನ ಗಂಡ?
ಅತ್ತೆ: ನಿನ್ನ ಗಂಡ ಅಂದರೆ ನನ್ನ ಮಗ ನಾಗರಿಕ ಪೂರೈಕೆ ಅಥವಾ ಮನೆ ಅಗತ್ಯ ಪೂರೈಕೆ ಸಚಿವ. ಈಗ ಹೇಳು ನೀನು ಯಾವ ಖಾತೆಯನ್ನು ನಿಭಾಯಿಸುತ್ತೀಯಾ?
ಸೊಸೆ: ವಿರೋಧ ಪಕ್ಷದ ನಾಯಕಿಯ ಸ್ಥಾನ..
*****
ಗಂಡ, ಹೆಂಡತಿ ಬಹಳ ದಿನಗಳಿಂದ ಸಿನಿಮಾ ನೋಡಲು ಹೋಗುತ್ತಾರೆ. ಸಿನಿಮಾ ಶುರುವಾದ ಸ್ವಲ್ಪಹೊತ್ತಿನ ನಂತರ..
ಹೆಂಡತಿ: ರೀ..ರೀ..
ಗಂಡ: ಏನೇ ಅದು..
ಹೆಂಡತಿ: ಹಿಂದ್ಗಡೆ ಸೀಟಿನವನು ನನ್ನ ಕಾಲಿನ ಮೇಲೆ ಕಾಲ್ ಹಾಕುತ್ತಿದ್ದಾನೆ..
ಗಂಡ: ಅಷ್ಟೇನಾ.. ಹಿಂದಕ್ಕೆ ತಿರುಗಿ ನಿನ್ನ ಮುಖ ತೋರಿಸು.. ಕಾಲು ಹಾಕುವುದನ್ನು ನಿಲ್ಲಿಸುತ್ತಾನೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.