ವಂದೇ ಮಾತರಂ ಅಂಬಿಕಾಂ ಭಗವತಿ |
ವಾಣಿ ರಮಾ ಸೇವಿತಾ |
ಕಲ್ಯಾಣಿ ಕಮನೀಯ ಕಲ್ಪನಪಿತಾಂ |
ವೇದಾಂತ ಪ್ರತಿಪಾದ್ಯಮಾನ್ಯವಿಭವನ್ ವಿದ್ಯಾಂ ಮನೋರಂಜನಿ ………
ಶ್ರೀಚಕ್ರಾಂಕಿತ ರತ್ನಪೀಠ ನಿಲಯಾಂ ಶ್ರೀರಾಜರಾಜೇಶ್ವರಿ ||
ಹಿಮಾದ್ರಿಸುತೆ ಓ ಹೇಮಲತೇ ಮಾತೇ ಶ್ರೀಲಲಿತೆ |
ಜಗಜನನಿ ಕಾತ್ಯಾಯಿನಿ ಶ್ರೀ ರಾಜರಾಜೇಶ್ವರಿ ನಮೋಸ್ತುತೆ ||
ನಿರ್ಮಲ ಚಿತ್ತೆ ಆನಂದ ರೂಪಿಣಿ |
ಆನಂದ ತಾಂಡವ ನಾಟ್ಯ ಮಯೂರಿ |
ಸಹಸ್ರಕೋಟಿ ರವಿ ತೇಜಸ್ವಿನಿ |
ಸಹನ ಶೀಲೆ ನೀ ರಾಜೇಶ್ವರಿ ||ಹಿಮಾದ್ರಿಸುತೆ||
ಮೋಹನ ಕಲ್ಯಾಣಿ ರಾಗ ವಿಹಾರಿ |
ಸೌಂದರ್ಯಾಲಹರಿ ಭುವನೇಶ್ವರಿ |
ಚಂದ್ರಚೂಡಾ ವಿಜಯದ ರಾಣಿ|
ಪಾಲಿಸು ಶ್ರೀಗೌರಿ ಪರಮೇಶ್ವರಿ ||ಹಿಮಾದ್ರಿಸುತೆ||
ನವರಾತ್ರಿಯಲಿ ನಿತ್ಯವೂ ಉತ್ಸವ |
ನವನವ ಅಲಂಕಾರ ನಿನ್ನಯ ವೈಭವ |
ನವರತ್ನ ಖಚಿತ ಸಿಂಹಾಸನೆಯೇ ದೇವಿ |
ನಯನ ಮನೋಹರಿ ಗಾಯತ್ರಿಯೇ ||ಹಿಮಾದ್ರಿಸುತೆ||