ಮನೆ ಯೋಗಾಸನ ಧನುರಾಸನ

ಧನುರಾಸನ

0

ಶಲಭಾಸನ ಮತ್ತು ಭುಜಂಗಾಸನಗಳ ಸಂಯುಕ್ತ ರೂಪವೇಧನುರಾಸನ. ‘ಧನುಃ’ ಎಂದರೆ ಬಿಲ್ಲು.

Join Our Whatsapp Group

ಮಾಡುವ ಕ್ರಮ

1)  ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ ಮಲಗಬೇಕು.

2)  ಅನಂತರ ಎರಡೂ ಕಾಲುಗಳನ್ನು ಮಂಡಿಗಳ ಬಳಿ ಹಿಂದಕ್ಕೆ ಬಗ್ಗಿಸಬೇಕು.

3)  ಹೀಗೆ ಬಗ್ಗಿಸಿದ ಕಾಲುಗಳನ್ನು ಎಡಗೈಯಿಂದ ಎಡಗಾಲ ಗಿಣ್ಣನ್ನು ಹಿಡಿದುಕೊಳ್ಳಬೇಕು.

4)  ಉಸಿರನ್ನು ಸಂಪೂರ್ಣವಾಗಿ ಹೊರಗೆ ಬಿಟ್ಟು ಚಿತ್ರದಲ್ಲಿ ತೋರಿಸಿರುವಂತೆ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಹೊಟ್ಟೆಯ ಮೇಲೆ ಇರುತ್ತದೆ. ಒಮ್ಮೊಮ್ಮೆ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತುವಲ್ಲಿ ತೊಡೆಗಳಲ್ಲಿ ಒಂದು ರೀತಿಯ ಹಿಡಿತ ಅಥವಾ ತೊಂದರೆ ಉಂಟಾಗುವುದು. ಆದ್ದರಿಂದ ನಿಧಾನವಾಗಿ ಕಾಲುಗಳನ್ನು ಮೇಲಕ್ಕೆ ಎತ್ತುವುದನ್ನು ಅಭ್ಯಾಸ ಮಾಡುವುದು ಉತ್ತಮ. ಧನುರಾಸನದ ಪೂರ್ಣವಸ್ಥೆಯಲ್ಲಿ ಶರೀರವು ಬಿಲ್ಲಿನಂತೆ ಬಗ್ಗಿರುತ್ತದೆ.

ಧನುರಾಸನದಲ್ಲಿ ಪಾರ್ಶ್ಚಾಧನುರಾಸನ ಹಾಗೂ ಧನುರಾಸನ ಕ್ರಿಯಾ ಎಂಬ ಎರಡು ವ್ಯತ್ಯಸ್ತ ಭಂಗಿಗಳೂ ಇವೆ. ಇಡೀ ಶರೀರದ ಭಾರವನ್ನು ಎಡ ಭಾಗದ ಮೇಲೆ ಹಾಕಿದಲ್ಲಿ ಅದು ಪಾರ್ಶ್ವಧನುರಾಸನವಾಗುತ್ತದೆ. ಈ ಸ್ಥಿತಿಯಲ್ಲಿ ಶರೀರವು ಎಡ ಭಾಗಕ್ಕೆ ವಾಲಿರುತ್ತದೆ. ಹಾಗೆಯೇ ಇದನ್ನು ಬಲಪಾರ್ಶ್ವದ ಮೇಲೂ ಮಾಡಬಹುದು. ‘ಧನುರಾಸನ ಕ್ರಿಯಾ’ ಎಂದರೆ ಯೋಗಾಭ್ಯಾಸಿಯು ಧನುರಾಸನದಲ್ಲಿದ್ದು, ಅದೇ ಸ್ಥಿತಿಯಲ್ಲಿ –ಮಕ್ಕಳ ಆಟದ ಕುದುರೆಯಂತೆ – ಹಿಂದಕ್ಕೂ ಮುಂದಕ್ಕೂ ತೂಗಾಡಿದರೆ ಅದು ಧನುರಾಸನ ಕ್ರಿಯೆಯಾಗುತ್ತದೆ.

ಲಾಭಗಳು: ಧನುರಾಸನ ಅಭ್ಯಾಸದಿಂದ ಎದೆ, ಹೃದಯ, ಹೊಟ್ಟೆ ಮತ್ತು ಶ್ವಾಸಕೋಶಗಳು ಬಲಿಷ್ಠವಾಗುವುವು. ಬೆನ್ನುಮೂಳೆಯು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಪಡೆಯುವುದು. ಜಠರಾಗ್ನಿಯು ಹೆಚ್ಚು ಉದ್ದೀಪನಗೊಳ್ಳುತ್ತದೆ. ಜೀರ್ಣಶಕ್ತಿಯೂ ಹೆಚ್ಚುವುದು.