ಮನೆ ದೇವರನಾಮ ದುರ್ಗಾಪರಮೇಶ್ವರಿ ದೇವಿ ಒಲಿದು

ದುರ್ಗಾಪರಮೇಶ್ವರಿ ದೇವಿ ಒಲಿದು

0

ದುರ್ಗಾಪರಮೇಶ್ವರಿ ದೇವಿ ಒಲಿದು ಬಾರಮ್ಮ ।

ಭ್ರಮರಾಂಬಿಕೆ ದೇವಿಯೇ ವರವ ನೀಡಮ್ಮ ।

ನಂದಿನಿಯ ಕಟಿಯಲ್ಲಿ ನೆಲೆಸಿದ ನಮ್ಮಮ್ಮ ।

ಶ್ರೀಗಂಧ ಪ್ರಸಾದ ನೀಡಿ ಆನಂದ ನೀಡಮ್ಮ ।।೧।।

ಪುಣ್ಯವಾಹಿನಿ ನಂದಿನಿಯಲ್ಲಿ ಮಿಂದು ಬಂದಿರುವೆ ।

ಕಟೀಲೇಶ್ವರಿ ಪೂಜೆಗೆಂದು ಮಲ್ಲಿಗೆ ತಂದಿರುವೆ ।

ಬಡವರ ಭಾಗ್ಯದ ನಿಧಿಯೇ ದೇವಿ ಭ್ರಮರಾಂಬೆ ತಾಯೆ ।

ಬದುಕಿನ ಕಷ್ಟವ ಕಳೆದು ಇಷ್ಟವ ನೀಡಮ್ಮ ತಾಯೆ ।।೨।।

ಬಂಗಾರದ ಪೀಠವನೇರಿದ ಭುವನೇಶ್ವರಿ ತಾಯೆ ।

ಶ್ರೀ ಗಂಧ ಹೂವಿನ ಪೂಜೆಯ ಪಡೆವ ಮಹಾಮಾಯೆ ।

ಶಕ್ತಿ ರೂಪಿಣಿ ಸಿಂಹವಾಹಿನಿ ಪರಮೇಶ್ವರಿ ತಾಯೆ ।

ತ್ರಿಭುವನ ಜನನಿ ಕರುಣ ಭರಣಿ ವರದಾಯಿನಿಯೇ ।।೩।।