ಮನೆ ಕ್ರೀಡೆ ನಮೀಬಿಯಾ vs ಕರ್ನಾಟಕ ಸರಣಿ ವೇಳಾಪಟ್ಟಿ ಇಲ್ಲಿದೆ

ನಮೀಬಿಯಾ vs ಕರ್ನಾಟಕ ಸರಣಿ ವೇಳಾಪಟ್ಟಿ ಇಲ್ಲಿದೆ

0

ಕರ್ನಾಟಕ ಹಾಗೂ ನಮೀಬಿಯಾ ನಡುವಣ ಏಕದಿನ ಸರಣಿಯು ಭರದಿಂದ ಸಾಗುತ್ತಿದೆ. 5 ಪಂದ್ಯಗಳ ಈ ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು ಸಮಬಲ ಸಾಧಿಸಿದೆ.

Join Our Whatsapp Group

ವಿಂಡ್‌ ಹೋಕ್​ ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಮೀಬಿಯಾ ತಂಡವನ್ನು 171 ರನ್ ​ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ ತಂಡವು, 35.5 ಓವರ್​ ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತ್ತು.

ಇನ್ನು 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಎಲ್ ಆರ್​ ಚೇತನ್ (169) ಹಾಗೂ ನಿಕಿನ್ ಜೋಸ್ (103) ಅವರ ಭರ್ಜರಿ ಶತಕದೊಂದಿಗೆ 4 ವಿಕೆಟ್ ನಷ್ಟಕ್ಕೆ 360 ರನ್ ಪೇರಿಸಿತ್ತು. ಆದರೆ ಈ ಬೃಹತ್ ಮೊತ್ತವನ್ನು ಚೇಸ್ ಮಾಡಿದ ನಮೀಬಿಯಾ ತಂಡವು 5 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ.

ಇದೀಗ 5 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಇನ್ನುಳಿದಿರುವ 3 ಪಂದ್ಯಗಳಲ್ಲಿ ಸಿರೀಸ್ ವಿನ್ನರ್ ಯಾರೆಂಬುದು ನಿರ್ಧಾರವಾಗಲಿದೆ. ಈ ಮೂರು ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ಜೂನ್ 7 (ಬುಧವಾರ)- 3ನೇ ಏಕದಿನ ಪಂದ್ಯ (ಸ್ಥಳ-ವಿಂಡ್‌ ಹೋಕ್​ ನ ವಾಂಡರರ್ಸ್ ಕ್ರಿಕೆಟ್ ಮೈದಾನ)

ಜೂನ್ 9 (ಶುಕ್ರವಾರ)- 4ನೇ ಏಕದಿನ ಪಂದ್ಯ (ಸ್ಥಳ-ವಿಂಡ್‌ ಹೋಕ್ ​ನ ವಾಂಡರರ್ಸ್ ಕ್ರಿಕೆಟ್ ಮೈದಾನ)

ಜೂನ್ 11 (ಭಾನುವಾರ)- 5ನೇ ಏಕದಿನ ಪಂದ್ಯ (ಸ್ಥಳ-ವಿಂಡ್‌ ಹೋಕ್ ​ನ ವಾಂಡರರ್ಸ್ ಕ್ರಿಕೆಟ್ ಮೈದಾನ)

ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದೆ.

ಕರ್ನಾಟಕ ಏಕದಿನ ತಂಡ ಹೀಗಿದೆ: ರವಿಕುಮಾರ್ ಸಮರ್ಥ್ (ನಾಯಕ), ವಿಶಾಲ್ ಓನಾಟ್, ನಿಕಿನ್ ಜೋಸ್, ಕೆವಿ ಸಿದ್ಧಾರ್ಥ್, ಕಿಶನ್ ಬಿದರೆ, ಕೃತಿಕ್ ಕೃಷ್ಣ, ಶುಭಾಂಗ್ ಹೆಗ್ಡೆ, ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅನೀಶ್ವರ್ ಗೌತಮ್, ಲೋಚನ್ ಅಪ್ಪಣ್ಣ, ಚೇತನ್ ಎಲ್ ಆರ್, ಆದಿತ್ಯ ಗೋಯಲ್, ರಿಷಿ ಬೊಪ್ಪಣ್ಣ.