ಗುಂಡ: ಡಾಕ್ಟರ್, ನಾನು ಕನ್ನಡಕ ಹಾಕ್ಕೊಂಡ್ರೆ ಖಂಡಿತ ಓದಬಹುದು ತಾನೇ?
ಡಾಕ್ಟರ್ : ಹೌದು ಖಂಡಿತ ಓದಬಹುದು ಧೈರ್ಯವಾಗಿರಿ.
ಗುಂಡ: ಹೌದಾ ಡಾಕ್ಟ್ರೇ.. ಈಗ ಸಮಾಧಾನ ಆಯ್ತು.. ಇಷ್ಟು ದಿನ ಎಲ್ರೂ ಓದೋಕೆ ಬರದೇ ಇರೋ ಅನಕ್ಷರಸ್ಥ ನೀನು, ನಿನ್ನ ಜೀವನಾನೂ ಒಂದು ಜೀವನಾನ ಅಂತ ಎಲ್ಲಾ ಗೇಲಿ ಮಾಡ್ತಾ ಇದ್ರು.. ಇನ್ಮೇಲೆ ಆ ಸಮಸ್ಯೆ ಇರಲ್ಲ……
ಅವನ ಮಾತು ಕೇಳಿ ಡಾಕ್ಟರ್ ಶಾಕ್…
*****
ಟೀಚರ್: ಏ ಸಂಜು ಅಯೋಗ್ಯ, ಒಂದು ದಿನ ಆದ್ರೂ ಯಾವುದಾದ್ರೂ ಬುಕ್ ತೆಗೆದು ನೋಡಿದ್ಯಾ?
ಸಂಜು: ಡೈಲಿ ಒಂದು ಬುಕ್ ತೆಗೆದು ನೋಡ್ತಾನೇ ಇರ್ತೀನಿ.
ಟೀಚರ್: ಓ ಹಾಗಾದ್ರೆ ಒಳ್ಳೆ ಬುದ್ಧಿ ಬಂದಿದೆ ಅನ್ನು.. ಯಾವ ಬುಕ್ ನೋಡ್ತೀಯಾ?
ಸಂಜು: ಫೇಸ್ ಬುಕ್ ಟೀಚರ್.
*****
ಒಮ್ಮೆ ಗಂಡ ಹೆಂಡತಿ ವಾಕ್ ಮಾಡಲು ಹೋದರು. ಅವರ ಮುಂದೆ ಒಂದು ಕತ್ತೆ ನಡೆದು ಹೋಗುತ್ತಿತ್ತು. ಹೆಂಡತಿಗೆ ತಮಾಷೆ ಮಾಡಬೇಕು ಅನಿಸಿತು..
ಹೆಂಡತಿ: ರೀ ನೋಡ್ರೀ ನಿಮ್ಮ ರಿಲೇಟಿವ್ ನಮಸ್ತೆ ಹೇಳ್ರೀ.
ಗಂಡ ಕೂಡಾ ಮಹಾ ಬುದ್ಧಿವಂತ.
ಗಂಡ: (ಕತ್ತೆ ಮುಂದೆ ಹೋಗಿ) ಸಮಸ್ತೆ ಮಾವ ಅಂದ.
ಅದನ್ನು ಕೇಳಿ ಹೆಂಡ್ತಿ ಮುಖ ಕೆಂಪಾಗಿತ್ತು.
*****
ಗಂಡ ಹೆಂಡತಿ ತರಕಾರಿ ಮಾರುಕಟ್ಟೆಗೆ ಹೋದರು…
ಹೆಂಡತಿ: ರೀ ಈ ಕಡೆ ನೀಡಿ, ನಾಲ್ಕು ಕಿಲೋ ಹಸಿ ಬಟಾಣಿ ಕಾಯಿ ತಗೋಳ್ಳಾ?
ಗಂಡ : ಓಕೆ ಓಕೆ ತಗೋ..,
ಹೆಂಡತಿ: ಹಲೋ, ನಾನು ಕೊಂಡುಕೊಳ್ಳೋದಿಕ್ಕೆ ನಿಮ್ಮ ಪರ್ಮಿಷನ್ ಕೇಳ್ತಾ ಇಲ್ಲ,
ಅಷ್ಟು ಕಾಯಿಸಿಪ್ಪೆ ಬಿಡಿಸೋಕೆ ನಿಮ್ಮ ಕೈಲಿ ಆಗುತ್ತಾ ಅಂತ ಡೌಟಿತ್ತು ಅದ್ಕೆ ಕೇಳ್ದೆ.














