ಮನೆ ಅಪರಾಧ ಅಪರಿಚಿತ ವಾಹನ ಢಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಅಪರಿಚಿತ ವಾಹನ ಢಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಸಾವು

0

ಮಂಡ್ಯ:ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ಕೆ.ಆರ್.ಪೇಟೆ ತಾಲೂಕಿನ ಹಿರೀಕಳಲೆ ಗ್ರಾಮದ ಬಳಿ ಮೈಸೂರು-ಹಾಸನ ರಾಜ್ಯ ಹೆದ್ದಾರಿಯಲ್ಲಿ ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ಸಂಭವಿಸಿರುವುದು ವರದಿಯಾಗಿದೆ.

Join Our Whatsapp Group


ಮೃತರನ್ನು ಹಿರೀಕಳಲೆ ಗ್ರಾಮದ ಸಂದೇಶ್(25) ಹಾಗೂ ಮರಡಹಳ್ಳಿ ನಿವಾಸಿ ಭರತ್(23) ಎಂದು ಗುರುತಿಸಲಾಗಿದೆ.
ಎಳನೀರು ವ್ಯಾಪಾರ ಮಾಡುತ್ತಿದ್ದ ಈ ಇಬ್ಬರು ಯುವಕರು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಕೆ.ಆರ್.ಪೇಟೆ
ಯಿಂದ ಕಿಕ್ಕೇರಿ ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಆ ವಾಹನದ ಪತ್ತೆಗಾಗಿ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಘಟನೆ ಬಗ್ಗೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.