ಮನೆ ರಾಜ್ಯ ಒನ್ ವೇನಲ್ಲಿ ಬಂದ ಟಿಪ್ಪರ್ ಬೈಕ್ ಗೆ ಢಿಕ್ಕಿ: ಇಬ್ಬರು ಸಾವು

ಒನ್ ವೇನಲ್ಲಿ ಬಂದ ಟಿಪ್ಪರ್ ಬೈಕ್ ಗೆ ಢಿಕ್ಕಿ: ಇಬ್ಬರು ಸಾವು

0

ಬೆಂಗಳೂರು: ಬೈಕ್​ ಗೆ ಒನ್ ವೇನಲ್ಲಿ ಬಂದ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

Join Our Whatsapp Group

ಬೆಂಗಳೂರಿನ ಪುಲಿಕೇಶಿ ನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ್​ ಸವಾರರಾದ ಯೂಸುಫ್(19), ಫರಜ್(19) ಮೃತ ರ್ದುದೈವಿಗಳು.

ಈ ಇಬ್ಬರು ಮೃತ ಯುವಕರು ಹೊರರಾಜ್ಯದ ನಿವಾಸಿಗಳಾಗಿದ್ದು, ಹೋಟೆಲ್ ​​ವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಮಧ್ಯರಾತ್ರಿ 2 ಗಂಟೆಯಲ್ಲಿ ಸ್ಕೂಟರ್ ​ನಲ್ಲಿ ಬರುತ್ತಿದ್ದಾಗ ಸಂಚಾರಿ ನಿಯಮ ಉಲ್ಲಂಘಿಸಿ ಟಿಪ್ಪರ್​ ಚಾಲಕ ಒನ್​ ವೇನಲ್ಲಿ ಬಂದಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ.

ಟಿಪ್ಪರ್ ಲಾರಿ ಚಾಲಕ ಸುನೀಲ್ ನನ್ನು ಸಂಚಾರಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.