ಮನೆ ರಾಜ್ಯ ಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

0

ಬೆಂಗಳೂರು: 2023-24ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ತರಗತಿಗಳು ನಡೆಯುತ್ತಿವೆ. ಈ ಬೆನ್ನಲ್ಲೆ ರಾಜ್ಯ ಸರ್ಕಾರ  ಮಕ್ಕಳ  ಶೂ, ಸಾಕ್ಸ್ ಖರೀದಿ ಕುರಿತಂತೆ ಇಂದು ಆದೇಶ ಹೊರಡಿಸಿದೆ.

Join Our Whatsapp Group

2022-23ನೇ ಸಾಲಿನಲ್ಲಿ ಶೂ, ಸಾಕ್ಸ್ ಖರೀದಿಗೆ ಬಿಜೆಪಿ ಸರ್ಕಾರ 132 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ 2023-24ನೇ ಸಾಲಿನಲ್ಲಿ 125 ಕೋಟಿ ರೂ. ಬಿಡುಗಡೆಗೊಳಿಸಿದ್ದು, 7 ಕೋಟಿ ರೂ. ಅನುದಾನ ಕಡಿತ ಮಾಡಿದೆ.

1ರಿಂದ 10ನೇ ತರಗತಿ ಮಕ್ಕಳಿಗೆ 1 ಜತೆ ಶೂ, 2 ಜತೆ ಸಾಕ್ಸ್ ಖರೀದಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.  , 1ರಿಂದ 5ನೇ ತರಗತಿ ಪ್ರತಿ ವಿದ್ಯಾರ್ಥಿಗಳ ಶೂ, ಸಾಕ್ಸ್​ ಖರೀದಿಗೆ 265 ರೂ., 6-8ನೇ ತರಗತಿ ವಿದ್ಯಾರ್ಥಿಗಳ ಶೂ, ಸಾಕ್ಸ್​ ಖರೀದಿಗೆ 295 ರೂ., 9-10ನೇ ತರಗತಿ ವಿದ್ಯಾರ್ಥಿಗಳ ಶೂ, ಸಾಕ್ಸ್​ ಖರೀದಿಗೆ 325 ರೂ. ನಿಗದಿ ಮಾಡಲಾಗಿದೆ.

ಹಿಂದಿನ ಲೇಖನಒನ್ ವೇನಲ್ಲಿ ಬಂದ ಟಿಪ್ಪರ್ ಬೈಕ್ ಗೆ ಢಿಕ್ಕಿ: ಇಬ್ಬರು ಸಾವು
ಮುಂದಿನ ಲೇಖನಅರಮನೆ ನಗರಿಯಲ್ಲಿ ಬೌಬೌ ಬಿರಿಯಾನಿ ದಂಧೆ: ರೆಸ್ಟೋರೆಂಟ್ ಗೆ ಬೀಗ ಜಡಿದ ಅಧಿಕಾರಿಗಳು