ಹಳೆಪಾತ್ರೆ, ಹಳೆ ಗಡಿಗೆ, ಹಳೆ ಮಡಕೆ,ಸೇರಿದಂತೆ ದಶಕಗಳ ಹಿಂದೆ ನಮ್ಮ ಪೂರ್ವಜರು ಬಳಸುತ್ತಿದ್ದ ಪಾತ್ರೆಗಳು, ಕೃಷಿ ಪರಿಕಗಳು, ಆಯುಧಗಳು, ಉಡುಗೆ, ತೊಡುಗೆಗಳನ್ನ ವೀಕ್ಷಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಮಂಗಳವಾರ ಆಯೋಜಿಸಿದ್ದ ”ನಮ್ಮ ಪರಂಪರೆಯ ವಸ್ತುಗಳು- ಒಂದು ನೋಟ” ಎಂಬ ಪುರಾತನ ಕಾಲದ ಪಳೆಯುಳಿಕೆಗಳ ವಸ್ತುಗಳ ಪ್ರದರ್ಶನದಲ್ಲಿ ಇತಿಹಾಸದ ವಿಭಾಗದ ವಿದ್ಯಾರ್ಥಿನಿಯರು, ಶಿಕ್ಷಕರು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟಿದ್ದು, ಜನಮನ ಸೆಳೆಯುತ್ತಿರುವುದಷ್ಟೇ ಅಲ್ಲದೆ, ಅಪ್ಪಟ ಗ್ರಾಮೀಣ ಸೊಗಡನ್ನು ಪಸರಿಸಿತು.
ಪ್ರದರ್ಶನದಲ್ಲಿ ಹಳೆಯ ಅಡುಗೆ ಸಾಮಾಗ್ರಿಗಳು, ಪಾತ್ರೆಗಳು, ಮಾಪನ ಸಾಮಗ್ರಿಗಳು, ಕೃಷಿ ಸಲಕರಣೆಗಳು, ಆಯುಧಗಳು, ಉಡುಗೆ- ತೊಡುಗೆಗಳು, ದೀಪಗಳು, ಹಳೆಯ ಕಾಲದ ಕಾಲು ಒರೆಸುವ ಬಟ್ಟೆ, ಬಿಸುಕಲ್ಲು ಶಾವಿಗೆ ಮಾಡುವ ಸಾಧನ, ಕೃಷಿಗೆ ಬಳಸುವ ಬಲರಾಮ, ಕೂರಿಗೆ, ಕುಂಟೆ ಬಾಯಿಕುಕ್ಕೆ, ಎತ್ತಿನಗಾಡಿ, ನೇಗಿಲು, ಮಡಕೆ, ಕುಡಿಕೆಗಳು,ಮುಚ್ಚುವ ತಟ್ಟೆ, ಒಲೆ,ಕೋಡಮಗೆ, ಹಿತ್ತಾಳೆಯ ದೊಡ್ಡ ಪಾತ್ರೆಗಳು, ತಾಂಬೂಲ ಇಡುವ ಪೆಟ್ಟಿಗೆ, ಪಣೇರಿ ಪೆಟ್ಟಿಗೆಗಳು, ಎಲ್ಲರ ಗಮನ ಸೆಳೆದವು.
ಮಾಪನ ಸಾಮಗ್ರಿಗಳಾದ ಸೇರು,ನಿಟಿವೆ,ಚಿಟ್ಟೆ, ಅಡಿಸೇರು,ಆಯುಧಗಳಾದ ಖಡ್ಗ, ಖುರುಪಿ, ಕುಡುಗೋಲು,ಹಳೆ ಕಾಲದ ರೇಡಿಯೋಗಳು,ಹಳೆಯ ಗಡಿಯಾರಗಳು,ತೊಟ್ಟಿಲು, ಮಹಿಳಾ ಅಲಂಕಾರಿಕ ಸಾಮಗ್ರಿಗಳು,ಹಳೇ ಕಾಲದ ಕನ್ನಡಿ, ಕಂದೀಲು,ಚಹಾ ಕೇಟಲ್, ಬೀಸಣಿಗೆ, ಬುಟ್ಟಿ, ವನಕೆ ,ಸಣಕ್ಕೆ ,ಟೋಪ್ಪಿಗೆ ,ಕೌದಿ ,ಟಿಪ್ಪು ಸುಲ್ತಾನ್ ಯುದ್ಧಕ್ಕಾಗಿ ಬಳಸಿದ ಗುಂಡು ಸೇರಿದಂತೆ ಉಡುಪುಗಳು ,ಹಳೆ ಕಾಲದ ನಾಣ್ಯಗಳು ಭಾರತೀಯ ಪರಂಪರೆಯನ್ನು ಮತ್ತೆ ನೆನಪಿಸಿದರು
ವಸ್ತು ಪ್ರದರ್ಶನವನ್ನು ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತ್ ಕುಮಾರ್ ಉದ್ಘಾಟಿಸಿದರು ಇತಿಹಾಸದ ವಿಭಾಗದ ಮುಖ್ಯಸ್ಥ ಎಚ್.ಎಂ. ಬಸವರಾಜು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.