ಮಂಡ್ಯ:17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆರೋಪಿ ಲೈಂಗಿಕ ಶೋಷಣೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಪೋಕ್ಸೋ ಕಾಯ್ದೆಯಡಿ ಅಂದಿನ ಶಿವಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಎಂ.ಜಯಲಕ್ಷ್ಮಿ ಅವರು ದೋಷಾರೋಪಣ ಪತ್ರ ದಾಖಲಿಸಿದ್ದರು.
ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಧೀಶರಾದ ಶಬಾನಾ ಬೇಗಂ ಲಾಡ್‌ಖಾನ್ ಅವರು ವಿಚಾರಣೆ ನಡೆಸಿ ಮೊದಲನೇ ಆರೋಪಿಗೆ ಕಲಂ 354-ಡಿ ಐ.ಪಿ.ಸಿ ಹಾಗೂ ಕಲಂ 12ರ ಅಡಿ 2 ವರ್ಷ ಸಾದಾ ಸಜೆ ಮತ್ತು 20 ಸಾವಿರ ದಂಡ ಹಾಗೂ ಮೊಲನೇ ಆರೋಪಿ ಸಾಗರ್, 2ನೇ ಆರೋಪಿ ಕುಳ್ಳಯ್ಯ, 3ನೇ ಆರೋಪಿ ರಾಜೇಶ, 4ನೇ ಆರೋಪಿ ದೊಡ್ಡಸಿದ್ದಯ್ಯ ಇವರಿಗೆ ಕಲಂ 504,341,324,506 ರೆ/ವಿ 34ರ ಐ.ಪಿ.ಸಿ ಕಾಯಿದೆ ಅಪರಾದಕ್ಕೆ ಅಪರಾಧಿಗಳು ಎಂದು ತೀರ್ಪು ನೀಡಿದ್ದು, ಕಲಂ 504 ರೆ/ವಿ 34ರ ಐ.ಪಿ.ಸಿ ಕಾಯಿದೆ ಅಪರಾದಕ್ಕೆ ತಲಾ 2 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. 5ನೇ ಆರೋಪಿ ಪುಟ್ಟತಾಯಿ, 6ನೇ ಆರೋಪಿ ನಾಗಮ್ಮ ಇವರಿಗೆ ಕಲಂ 504,323 ರೆ/ವಿ 34ರ ಐ.ಪಿ.ಸಿ ಕಾಯಿದೆ ಅಪರಾದಕ್ಕೆ ಅಪರಾಧಿಗಳು ಎಂದು ತೀರ್ಪು ನೀಡಿದ್ದು, ಇವರಿಗೆ ಒಳ್ಳೆಯ ನಡತೆ ಮತ್ತು ಶಾಂತಿಯನ್ನು ಪಾಲನೆ ಮಾಡುವಂತೆ 2 ವರ್ಷಗಳ ಅವಧಿಗೆ ಜಾಮೀನು ಹಾಗೂ ಮಚ್ಚಳಿಕೆಯನ್ನು ನೀಡುವಂತೆ ಆದೇಶಿಸಿರುತ್ತದೆ.
ನೊಂದ ಬಾಲಕಿಗೆ 30 ಸಾವಿರ ಪರಿಹಾರ ನೀಡಲು ಆದೇಶಿಸಿರುತ್ತಾರೆ.ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಜೆ ಪೂರ್ಣಿಮ ಅವರು ವಾದ ಮಂಡಿಸಿರುತ್ತಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.