ಮನೆ ಮನರಂಜನೆ ಸೆ.28 ರಂದು ‘ಸಲಾರ್’ ಚಿತ್ರ ತೆರೆಗೆ

ಸೆ.28 ರಂದು ‘ಸಲಾರ್’ ಚಿತ್ರ ತೆರೆಗೆ

0

ಹೈದರಾಬಾದ್: ಹೊಂಬಾಳೆ ಫಿಲ್ಮ್ಸ್‌ ಅವರ ಪ್ರಭಾಸ್ ನಟನೆಯ ʼಸಲಾರ್‌ʼ ಚಿತ್ರ ಸೆ.28 ರಂದು ವಿಶ್ವದೆಲ್ಲೆಡೆ ʼ ಅದ್ಧೂರಿಯಾಗಿ ತೆರೆಗೆ ಬರಲಿದೆ.

Join Our Whatsapp Group

ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಸಲಾರ್‌ʼ ಸಿನಿಮಾ ಪ್ರಭಾಸ್‌ ವೃತ್ತಿ ಬದುಕಿನ ಮತ್ತೊಂದು ಬ್ಲಾಕ್‌ ಬಸ್ಟರ್‌ ಹಿಟ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

“ಅತ್ಯಂತ ಹಿಂಸೆಯ ವ್ಯಕ್ತಿಯನ್ನು ನೋಡಲು ತಯಾರಾಗಿ..” ಸಲಾರ್‌ ಟೀಸರ್‌ ಜು.6 ಸಂಜೆ 5:12 ಕ್ಕೆ ರಿಲೀಸ್‌ ಆಗಲಿದೆ ಎಂದು ಸಿನಿಮಾ ತಂಡ ಫೈಟಿಂಗ್‌ ಅಖಾಡದ ಫೋಟೋವೊಂದನ್ನು ರಿಲೀಸ್‌ ಮಾಡಿ ತಿಳಿಸಿದೆ.

ಪ್ರಭಾಸ್‌ , ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್, ಮಧು ಗುರುಸ್ವಾಮಿ ಮತ್ತು ಜಗಪತಿ ಬಾಬು ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.