ಮನೆ ಅಪರಾಧ ಬೈಕ್ ನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಸಿದ ಕಳ್ಳರು

ಬೈಕ್ ನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಸಿದ ಕಳ್ಳರು

0

ಮದ್ದೂರು:ಪಾದಚಾರಿ ಮಹಿಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದಿರುವ ಘಟನೆ ತಾಲೂಕಿನ ಸಾದೊಳಲು – ಬಿ.ಗೌಡಗೆರೆ ಮಾರ್ಗದಲ್ಲಿ ನಡೆದಿದೆ.

Join Our Whatsapp Group

ಸಾದೊಳಲು ಗ್ರಾಮದ ಶಿವಲಿಂಗಯ್ಯರ ಪತ್ನಿ ಜಯಲಕ್ಷ್ಮಮ್ಮರ ಚಿನ್ನದ ಮಾಂಗಲ್ಯ ಸರವನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಭಾನುವಾರ ಸಂಜೆ ಸ್ವಗ್ರಾಮದಿಂದ ಕೆಲಸದ ನಿಮಿತ್ತ ಬಿ.ಗೌಡಗೆರೆಗೆ ರಸ್ತೆಯಲ್ಲಿ ಜಯಲಕ್ಷ್ಮಮ್ಮ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಹಿಂಬಾಲಿಸಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಸಿದಿದ್ದಾರೆ,ಮಹಿಳೆ ತಕ್ಷಣ ಕೂಗಿಕೊಂಡಿದ್ದು ಆದರೆ ಸುತ್ತಮುತ್ತಲ ಜಮೀನುಗಳಲ್ಲಿ ಯಾರು ಇರದ ಹಿನ್ನೆಲೆಯಲ್ಲಿ ಯಾರೊಬ್ಬರು ರಕ್ಷಣೆಗೆ ಸಿಗಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡರು.

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.