ಮನೆ ಸುದ್ದಿ ಜಾಲ ಬೆಳಗಾವಿ  : ಸುಳ್ಳು ಅತ್ಯಾಚಾರ ಕೇಸ್ ̧  ಮಹಿಳೆಯ ಬಂಧನ

ಬೆಳಗಾವಿ  : ಸುಳ್ಳು ಅತ್ಯಾಚಾರ ಕೇಸ್ ̧  ಮಹಿಳೆಯ ಬಂಧನ

0

ಬೆಳಗಾವಿ: ತನ್ನನ್ನು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಮೋಸ ಮಾಡಿದ್ದಾರೆ ಅಂತಾ ಸುಳ್ಳು ಆರೋಪ ಹೊರಿಸಿ, ಪೊಲೀಸ್‌ ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳು, ಅಮಾಯಕರಿಂದ ಹಣ ವಸೂಲಿಗೆ ಸಂಚು ರೂಪಿಸುತ್ತಿದ್ದ ಮಹಿಳೆಯೊಬ್ಬರನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದು ಮೂಲತಃ ಘಟಪ್ರಭಾದ ಸದ್ಯ ಬೆಳಗಾವಿ ಲಕ್ಷ್ಮೀ ನಗರ‌ ನಿವಾಸಿ ರೇಷ್ಮಾ ಶಂಕರ ಮುತಗಾ ಬಂಧಿತ ಮಹಿಳೆ. ಕೇವಲ ಸಾಮಾನ್ಯ ವ್ಯಕ್ತಿಗಳಿಗಷ್ಟೇ ಅಲ್ಲ. ಪೊಲೀಸ್ ಅಧಿಕಾರಿಗಳ ಮೇಲೂ ಸುಳ್ಳು ದೂರು ಕೊಟ್ಟು, ವಂಚನೆ ಮಾಡುತ್ತಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗುತ್ತಿದೆ.

ಈ ಪ್ರಕರಣ ಸಂಬಂಧ ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆರೋಪಿ ಮಹಿಳೆ ಮೇಲೆ ರೌಡಿಶೀಟರ್‌ ಪ್ರಕರಣ ತೆರೆಯಲಾಗಿದೆ. ಮದುವೆಗೆ ಸಂಬಂಧಿಸಿದ ವಿವಿಧ ಆ್ಯಪ್‌ಗಳಲ್ಲಿ ಸುಂದರವಾದ ನಕಲಿ ಫೋಟೊಗಳನ್ನು ಹಾಕುವ ಈ ಮಹಿಳೆ ದೊಡ್ಡ ವ್ಯಕ್ತಿಗಳು, ಹಣವಂತರಿಗೆ ಜಾಲ ಬೀಸುತ್ತಿದ್ದರು. ನಿಗದಿತ ಸ್ಥಳಕ್ಕೆ ಅವರನ್ನು ಕರೆಸಿದ ಬಳಿಕ ಅತ್ಯಾಚಾರ ಎಸಗಿದ ಆರೋಪ ಮಾಡಿ ಹಣ ಪೀಕುವ ಸಂಚು ರೂಪಿಸುತ್ತಿದ್ದರು. ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆಗೆ ಹೋದಾಗ, ಅಲ್ಲಿಯೂ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎಂದು ತಿಳಿಸಿದರು. ಬಂಧಿತ ಮಹಿಳೆ ಎಂಟು ತಿಂಗಳ ಹಿಂದೆ ಘಟಪ್ರಭಾ ಠಾಣೆಯಲ್ಲಿ ತನಗೆ ಮೋಸ ಮಾಡಿ ಓಡಿ ಹೋಗಿದ್ದಾರೆ ಅಂತಾ ಒಬ್ಬ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದರು.

ಹಾಗೂ ತುಮಕೂರಿನಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಕಲ್ಯಾಣ ಯರಕೂಳ ಎಂಬ ವ್ಯಕ್ತಿ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಲೂ 1 ಲಕ್ಷ ಲಂಚ ಪಡೆದ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ತನಿಖೆ ಮಾಡಿಸಿದಾಗ ಮಹಿಳೆಯ ಮೋಸದಾಟ ಬೆಳಕಿಗೆ ಬಂದಿದೆ ಎಂದರು.  ಪಕ್ಕದ ಮನೆಯವರು ಪರಿಚಯವಾಗಿ ಮದುವೆಯಾಗುವುದಾಗಿ ಮೋಸ ಮಾಡಿದ್ದಾರೆ ಎಂದು 2012ರಲ್ಲಿ ಕುಡಚಿ ಪೊಲೀಸ್ ಠಾಣೆಯಲ್ಲಿ, 2022ರಲ್ಲಿ ಘಟಪ್ರಭಾದಲ್ಲಿ ನಾಗರಾಜ ಗದಗ ಎಂಬ ಕಾನ್‌ಸ್ಟೇಬಲ್‌ ಮೇಲೆ ಪ್ರಕರಣ ದಾಖಲಿಸಿದ್ದರು. 2023ರಲ್ಲಿ ಗಜೇಂದ್ರಗಡದ ಆಕಾಶ ಎಂಬುವವರ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಾರೆ. 2025ರಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುರೇಶ ಎಂಬುವವರು ಮೋಸ ಮಾಡಿದ್ದಾರೆ ಎಂದು ಧಾರವಾಡ‌ ಸಬರ್ಬನ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ ಎಂದು ಎಸ್​ಪಿ ತಿಳಿಸಿದರು ಎನ್ನಲಾಗುತ್ತಿದೆ.