ಮನೆ ಅಪರಾಧ ಮೈಸೂರು: ಅಪ್ರಾಪ್ತರ ಬಡಿದಾಟದಲ್ಲಿ ಓರ್ವ ಸಾವು

ಮೈಸೂರು: ಅಪ್ರಾಪ್ತರ ಬಡಿದಾಟದಲ್ಲಿ ಓರ್ವ ಸಾವು

0

ಮೈಸೂರು: ಅಪ್ರಾಪ್ತರ ನಡುವೆ ಆರಂಭವಾದ ಗಲಾಟೆಯಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಸೋಮವಾರ ಸಂಜೆ ನಡೆದಿದೆ.             

Join Our Whatsapp Group

ಅಲ್ಲಿ ಸುನ್ನಿ ಚೌಕದ ಬಿಬಿ ಕೇರಿ ನಿವಾಸಿಯಾದ ಬಾಲಕನೋರ್ವ ಆಟವಾಡಲೆಂದು ಸುನ್ನಿ ಚೌಕದ ಸಂಬಂಧಿಕರ ಮನೆ ಬಳಿ ಬಂದಿದ್ದ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಇಬ್ಬರು ಅಪ್ರಾಪ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಯಿತು. ಮನೆಯವರು ಅತ್ತ ಗಮನ ಹರಿಸದಿದ್ದಾಗ ಸಂಜೆ 6:00 ಸಮಯದಲ್ಲಿ ಚಾಕುವಿನಿಂದ ಇರಿದಿದ್ದಾನೆ.    

ತೀವ್ರ ರಕ್ತಸ್ರಾವದ ಕಾರಣ, 15 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಮಂಡಿ ಠಾಣೆ ಇನ್ಸ್ಪೆಕ್ಟರ್ ನಾಗೇಶ್ ಹಾಗೂ ಸಿಬ್ಬಂದಿ ಹತ್ಯಗೈದ ಅಪ್ರಾಪ್ತನನ್ನು  ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಕೆ. ಅಶ್ವಥ್ ನಾರಾಯಣ ಭೇಟಿ ನೀಡಿ ಪರಿಶೀಲಿಸಿದರು.

ಮುಂಜಾಗ್ರತ ಕ್ರಮವಾಗಿ ಸುನ್ನಿ ಚೌಕದ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಕಟ್ಟೆಚ್ಚರ ವಹಿಸಲಾಗಿದೆ.