ಮನೆ ಮನರಂಜನೆ ‘ಹಾಯ್​ ನಾನ್ನ’: ನಾನಿ ನಟನೆಯ 30ನೇ ಸಿನಿಮಾದ ಶೀರ್ಷಿಕೆ ಬಿಡುಗಡೆ

‘ಹಾಯ್​ ನಾನ್ನ’: ನಾನಿ ನಟನೆಯ 30ನೇ ಸಿನಿಮಾದ ಶೀರ್ಷಿಕೆ ಬಿಡುಗಡೆ

0

ತೆಲುಗಿನ ‘ನ್ಯಾಚುರಲ್ ಸ್ಟಾರ್’ ನಾನಿ ಅವರು ಅಭಿನಯಿಸುತ್ತಿರುವ 30ನೇ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ‘ಹಾಯ್​ ನಾನ್ನ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ನಾನಿ ಜೊತೆ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್​ ಠಾಕೂರ್​ ಅವರು ನಟಿಸುತ್ತಿದ್ದಾರೆ.

Join Our Whatsapp Group

ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗಿನಲ್ಲಿ ‘ಹಾಯ್ ನಾನ್ನ’ ಎಂದರೆ ‘ಹಾಯ್ ಅಪ್ಪ’ ಎಂದರ್ಥ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಒಂದೇ ಶೀರ್ಷಿಕೆ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡವು ತಮಿಳು, ಮಲಯಾಳಂ, ಕನ್ನಡ ಭಾಷೆಯಲ್ಲಿ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆ ಇಟ್ಟಿದೆ.

ಟಾಲಿವುಡ್​ನ ‘ಮೆಗಾ ಸ್ಟಾರ್’ ಚಿರಂಜೀವಿ ಅವರ ಆಶೀರ್ವಾದ ಪಡೆದು ಆರಂಭ ಆಗಿರುವ ಈ ಸಿನಿಮಾಗೆ ಶೌರ್ಯುವ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಶೌರ್ಯುವ್ ಅವರಿಗೆ ನಿರ್ದೇಶಕನಾಗಿ ‘ಹಾಯ್​ ನಾನ್ನ’ ಮೊದಲ ಸಿನಿಮಾ ಆಗಲಿದೆ. ಹೊಸ ನಿರ್ದೇಶಕನ ಜೊತೆ ಸೇರಿ ನಾನಿ ಮತ್ತು ಮೃಣಾಲ್​ ಠಾಕೂರ್​ ಅವರು ಕೆಲಸ ಮಾಡುತ್ತಿದ್ದಾರೆ. ಶೀರ್ಷಿಕೆ ನೋಡಿದರೆ ಸಾಕು ಈ ಸಿನಿಮಾದ ಕಥೆ ಏನೆಂದು ಊಹಿಸಬಹುದು. ಇದೊಂದು ಎಮೋಷನಲ್ ಫ್ಯಾಮಿಲಿ ಎಂಟರ್ ​ಟೇನ್ಮೆಂಟ್​ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ಕಥೆಯನ್ನು ‘ಹಾಯ್​ ನಾನ್ನ’ ಚಿತ್ರ ಒಳಗೊಂಡಿದೆ.

ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್​ಟೇನ್ಮೆಂಟ್​’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.

‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ.