ಒಬ್ಬ ತರುಣ ಲೇಖಕ ೧೦೦೦ ಪುಟಗಳಷ್ಟು ಕಾದಂಬರಿಯೊಂದನ್ನು ಬರೆದು ಆದಕ್ಕೆ ಸೂಕ್ತ
ತಲೆಬರಹವೊಂದನ್ನು ಸೂಚಿಸಲು ಪ್ರಸಿದ್ಧ ಲೇಖಕನ ಬಳಿ ತಂದುಕೊಟ್ಟ.
ಈತ ಪುಸ್ತಕಗಳ ಪುಟಗಳನ್ನು ತಿರುವಿಹಾಕುತ್ತಾ “ಇದರಲ್ಲಿ ಮದುವೆ ಮತ್ತು ದಿಬ್ಬಣದ
ಪ್ರಸ್ತಾಪವನ್ನೇನಾದರೂ ಬರೆದಿದ್ದೀಯಾ?” ಕೇಳಿದರು.
ತರುಣ ಲೇಖಕ: “ಅಂತಹ ಪ್ರಸ್ತಾಪವನ್ನು ಬರೆದಿಲ್ಲ” ಆಂದ.
ಪ್ರಸಿದ್ಧಲೇಖಕರು: “ಸರಿ ಹಾಗಾದರೆ ಈ ಕಾದಂಬರಿಗೆ ‘ಮದುವೆಯೂ ಇಲ್ಲ: ದಿಬ್ಬಣವೂ ಇಲ್ಲ’ ಎಂದು ಹೆಸರಿಡು. ಈ ಕಾದಂಬರಿಗೆ ಅದೇ ಸೂಕ್ತವಾದ ಹೆಸರು,” ಅಂದರು.
***
ಗುರು: “ಮೊಟ್ಟ ಮೊದಲ ಬಾರಿಗೆ ಕಿವಿಗಳನ್ನು ಆಪರೇಷನ್ ಮಾಡಿಸಿಕೊಂಡವರು ಯಾರು?”
ಶಿಷ್ಯ:”ರಾಮಾಯಣ ಕಾಲದಲ್ಲಿ ಶೂರ್ಪನಖಿಯ ಕಿವಿಗಳನ್ನು ಕತ್ತರಿಸಲಾಯಿತು. ಅದೇ ಮೊಟ್ಟ ಮೊದಲ ಕೇಸು ಸಾರ್!”
***
ಮಗ ಪರೀಕ್ಷೆ ತಯಾರಿ ಮುಗಿಸಿ ಶಾಲೆಗೆ ಹೊರಟಿದ್ದ. ದೇವರ ಫೋಟೋ ಮೇಲೆ ಭಾರವಾದ ಕಲ್ಲೊಂದನ್ನು ಮಗ ಇಟ್ಟಿದ್ದನ್ನು ಕಂಡು ತಂದೆ ಕಂಡು ಕೇಳಿದರು
ತಂದೆ: “ಇದೇನಯ್ಯಾ ದೇವರ ಫೋಟೋ ಮೇಲೆ ಭಾರಿ ಕಲ್ಲನ್ನು ಇಟ್ಟಿದ್ದೀಯ? ಅದೇನೂಂತ ಹೇಳು”
ಮಗ: “ ನೀನೇ ಹೇಳಿದ್ದಯಲ್ಲಪ್ಪಾ ದೇವರ ಮೇಲೆ ಭಾರ ಹಾಕಿ ಪರೀಕ್ಷೆಗೆ ಹೋಗಿ ಬರೆದು ಬಾ ಎಂದು ಅದನ್ನೇ ನಾನು ಮಾಡಿರೋದು!”