ಮಂಡ್ಯ: ಜಿಲ್ಲೆಯಲ್ಲಿ ಕುತೂಹಲ ಕೆರಳಿಸಿದ್ದ ಮಂಡ್ಯದ ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಜು.24 ರಂದು ಚುನಾವಣೆ ನಡೆಯಲಿದೆ.
ಕಳೆದ ಜು. 6ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಕೋರಂ ಅಭಾವದಿಂದ ಮುಂದೂಡಲಾಗಿತ್ತು. ಈ ವೇಳೆ ಇಬ್ಬರು ಜೆಡಿಎಸ್ ನಿರ್ದೇಶಕರನ್ನು ಸರ್ಕಾರ ಅನರ್ಹಗೊಳಿಸಿತ್ತು.
ಮನ್ಮುಲ್ ನಲ್ಲಿ 12 ನಿರ್ದೇಶಕ ಸ್ಥಾನಗಳಿದ್ದು, 1 ನಾಮ ನಿರ್ದೇಶಕ ಸ್ಥಾನ ಹಾಗೂ ನಾಲ್ವರು ಅಧಿಕಾರಿಗಳು ಸೇರಿ 17 ಜನರಿಗೆ ಮತದಾನ ಹಕ್ಕಿರಲಿದೆ.
ಇದರಲ್ಲಿ 7 ಜೆಡಿಎಸ್ ಬೆಂಬಲಿತ ನಿರ್ದೇಶಕರು, 3 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, 2 ಬಿಜೆಪಿ ಬೆಂಬಲಿತ ನಿರ್ದೆಶಕರಿದ್ದಾರೆ. ಮನ್ಮುಲ್ ಮಂಡಳಿಯ ಅಧಿಕಾರಕ್ಕೆ 9 ಮತಗಳು ಅಗತ್ಯವಾಗಿದ್ದು, ಬಿಜೆಪಿ ಬೆಂಬಲಿತ ಇಬ್ಬರು ನಿರ್ದೇಶಕರ ಮತ ನಿರ್ಣಾಯಕವಾಗಲಿದೆ.
ಮನ್ಮುಲ್ ಅಧಿಕಾರಕ್ಕಾಗಿ ಜೆಡಿಎಸ್ -ಕಾಂಗ್ರೆಸ್ ನಿಂದ ತಂತ್ರಗಾರಿಕೆ ನಡೆಸಲಾಗುತ್ತಿದ್ದು, ಜು.24 ರಂದು ನಡೆಯುಲಿರುವ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.