ಮನೆ ರಾಜ್ಯ ಮಂಡ್ಯ ಮನ್ಮುಲ್ ಅಧ್ಯಕ್ಷ  ಸ್ಥಾನಕ್ಕೆ ಜು.24 ರಂದು ಚುನಾವಣೆ

ಮಂಡ್ಯ ಮನ್ಮುಲ್ ಅಧ್ಯಕ್ಷ  ಸ್ಥಾನಕ್ಕೆ ಜು.24 ರಂದು ಚುನಾವಣೆ

0

ಮಂಡ್ಯ: ಜಿಲ್ಲೆಯಲ್ಲಿ ಕುತೂಹಲ ಕೆರಳಿಸಿದ್ದ ಮಂಡ್ಯದ ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಜು.24 ರಂದು ಚುನಾವಣೆ ನಡೆಯಲಿದೆ.

Join Our Whatsapp Group

ಕಳೆದ ಜು. 6ಕ್ಕೆ  ನಿಗದಿಯಾಗಿದ್ದ ಚುನಾವಣೆಯನ್ನು ಕೋರಂ ಅಭಾವದಿಂದ ಮುಂದೂಡಲಾಗಿತ್ತು. ಈ ವೇಳೆ ಇಬ್ಬರು ಜೆಡಿಎಸ್ ನಿರ್ದೇಶಕರನ್ನು ಸರ್ಕಾರ ಅನರ್ಹಗೊಳಿಸಿತ್ತು.

ಮನ್ಮುಲ್ ನಲ್ಲಿ 12 ನಿರ್ದೇಶಕ ಸ್ಥಾನಗಳಿದ್ದು, 1 ನಾಮ ನಿರ್ದೇಶಕ ಸ್ಥಾನ ಹಾಗೂ ನಾಲ್ವರು ಅಧಿಕಾರಿಗಳು ಸೇರಿ 17 ಜನರಿಗೆ ಮತದಾನ ಹಕ್ಕಿರಲಿದೆ.

ಇದರಲ್ಲಿ 7 ಜೆಡಿಎಸ್ ಬೆಂಬಲಿತ ನಿರ್ದೇಶಕರು, 3 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, 2 ಬಿಜೆಪಿ ಬೆಂಬಲಿತ ನಿರ್ದೆಶಕರಿದ್ದಾರೆ. ಮನ್ಮುಲ್ ಮಂಡಳಿಯ ಅಧಿಕಾರಕ್ಕೆ  9 ಮತಗಳು ಅಗತ್ಯವಾಗಿದ್ದು, ಬಿಜೆಪಿ  ಬೆಂಬಲಿತ ಇಬ್ಬರು ನಿರ್ದೇಶಕರ ಮತ ನಿರ್ಣಾಯಕವಾಗಲಿದೆ.

ಮನ್ಮುಲ್ ಅಧಿಕಾರಕ್ಕಾಗಿ ಜೆಡಿಎಸ್ -ಕಾಂಗ್ರೆಸ್ ನಿಂದ ತಂತ್ರಗಾರಿಕೆ ನಡೆಸಲಾಗುತ್ತಿದ್ದು, ಜು.24 ರಂದು ನಡೆಯುಲಿರುವ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಹಿಂದಿನ ಲೇಖನಮೈಸೂರು ಸೇಲ್ಸ್​ ಲಿಮಿಟೆಡ್​ ನ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಶರಾವತಿ ಸಂತ್ರಸ್ತರ ಪ್ರಕರಣ: ಸುಪ್ರೀಂಕೋರ್ಟ್ ಗೆ ಐ.ಎ ಸಲ್ಲಿಕೆ- ಈಶ್ವರ ಖಂಡ್ರೆ