ಮನೆ ಅಪರಾಧ ಇಕೋ ವಾಹನಕ್ಕೆ ಮಣ್ಣು ತುಂಬಿದ್ದ ಲಾರಿ ಡಿಕ್ಕಿ: ವಾಹನ ಜಖಂ

ಇಕೋ ವಾಹನಕ್ಕೆ ಮಣ್ಣು ತುಂಬಿದ್ದ ಲಾರಿ ಡಿಕ್ಕಿ: ವಾಹನ ಜಖಂ

0

ವಿಟ್ಲ: ಮಣ್ಣು ತುಂಬಿದ್ದ ಲಾರಿ ಇಕೋ ವಾಹನಕ್ಕೆ ಢಿಕ್ಕಿಯಾದ ಘಟನೆ ಇಲ್ಲಿನ ಉಕ್ಕುಡ – ಕನ್ಯಾನ ರಸ್ತೆಯಲ್ಲಿ ಶನಿವಾರ ಸಂಭವಿಸಿದೆ.

Join Our Whatsapp Group

ವಿಟ್ಲ ಉಕ್ಕುಡ ಕನ್ಯಾನ ರಸ್ತೆಯಲ್ಲಿ ಸಂಚರಿಸುತ್ತಿರುವ ಮಣ್ಣಿನ ಲಾರಿಯು ಇಕೋ ವಾಹನಕ್ಕೆ ಢಿಕ್ಕಿಯಾಗಿ ವಾಹನ ಜಖಂಗೊಂಡಿದ್ದು, ಯಾರೂ ಗಾಯಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ಯಾನ ಕಡೆಯಿಂದ ಬರುತ್ತಿದ್ದ ಬಾಕ್ಸೈಟ್ ಮಣ್ಣಿನ ಲಾರಿ ದೇಲಂತಬೆಟ್ಟು ಕೇಪುಳಗುಡ್ಡೆ ತಿರುವಿನಲ್ಲಿ ವಿಟ್ಲ ಉಕ್ಕುಡ ಕಡೆಯಿಂದ ಬರುತ್ತಿದ್ದ ಇಕೋ ವಾಹನಕ್ಕೆ ಢಿಕ್ಕಿಯಾಗಿದೆ. ಇದರಿಂದ ಇಕೋ ವಾಹನದ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ.

ಈಗಾಗಲೇ ಹಲವು ಅಪಘಾತಗಳಿಗೆ ಕಾರಣವಾದ ಘಟನೆಗಳ ಸರಮಾಲೆಯನ್ನು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಈ ಲಾರಿಗಳಿಗೆ ಕಡಿವಾಣ ಹಾಕುವವರಿಲ್ಲ.