ಮನೆ ಅಪರಾಧ ವಿಮಾನ ಟಿಕೆಟ್ ಬುಕ್ ಮಾಡುವುದಾಗಿ ಹೇಳಿ 2.30 ಲಕ್ಷ ವಂಚನೆ: ಟ್ರಾವೆಲ್ಸ್ ಮಾಲೀಕನ ವಿರುದ್ಧ ಪ್ರಕರಣ...

ವಿಮಾನ ಟಿಕೆಟ್ ಬುಕ್ ಮಾಡುವುದಾಗಿ ಹೇಳಿ 2.30 ಲಕ್ಷ ವಂಚನೆ: ಟ್ರಾವೆಲ್ಸ್ ಮಾಲೀಕನ ವಿರುದ್ಧ ಪ್ರಕರಣ ದಾಖಲು

0

ಮೈಸೂರು: ವಿಮಾನ ಟಿಕೆಟ್ ಬುಕ್ ಮಾಡುವುದಾಗಿ 2.30 ಲಕ್ಷ ರೂ. ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಆರೋಪದ ಮೇರೆಗೆ ಬೆಂಗಳೂರಿನ ಟ್ರಾವೆಲ್ಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

Join Our Whatsapp Group

ಬೆಂಗಳೂರಿನ ಸಾಯಿ ನಗರದಲ್ಲಿರುವ ರೈಸಿಂಗ್ ಟೂರ್ಸ್ ಅಂಡ್ ಟ್ರಾವೆಲ್ಸ್ ಇಂಡಿಯಾ ಮಾಲೀಕರಾದ ರೇಣುಕ ದೇವಿ ರಾಜನ್ ಮತ್ತು ಶಿವರಾಜು ಆರೋಪಕ್ಕೆ ಗುರಿಯಾಗಿದ್ದಾರೆ.

ಮೈಸೂರಿನ ದಟ್ಟಗಳ್ಳಿ ಮೂರನೇ ಹಂತದ ನಿವಾಸಿ ಎಂ. ಎ. ಶಿವಪ್ರಕಾಶ್ (43) ಎಂಬುವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ವಿಮಾನದ ಟಿಕೆಟ್ ಬುಕ್ ಮಾಡಲು 2,30,110 ರೂ.ಗಳನ್ನು ಆರ್.ಟಿ.ಜಿ.ಎಸ್. ಮೂಲಕ ವರ್ಗಾವಣೆ ಮಾಡಿಸಿಕೊಂಡು  ಟಿಕೆಟ್ ಬುಕ್ ಮಾಡದೆ ವಂಚಿಸಿದ್ದಾರೆ  ಎಂದು ಶಿವಪ್ರಕಾಶ್ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಮೈಸೂರು ನಗರ ಸೆನ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.