ಮನೆ ದೇವರ ನಾಮ ಗಜಮುಖ ಸಲಹೆನ್ನ ದಯದಿ

ಗಜಮುಖ ಸಲಹೆನ್ನ ದಯದಿ

0

ಗಜಮುಖ ಸಲಹೆನ್ನ ದಯದಿ || ಪ ||

ಗಜಮುಖ ಸಲಹೆನ್ನ

ತ್ರಿಜಗದಿ ಪೂಜ್ಯನೆ ನಿಜಮತಿ ಪಾಲಿಸಿ || ಅ.ಪ ||

ವಿಘ್ನನಾಯಕ ಎನ್ನ ಅಜ್ಞಾನ ಖಂಡ್ರಿಸಿ

ವಿಘ್ನವ ತಾರದೆ ಸುಜ್ಞಾನ ಕರುಣಿಸು || 1 ||

ಅಮರಾದಿ ವಿನುತ ಹಿಮಸುತೆಸಂಜಾತ

ವಿಮಲಸುಚರಿತನೆ ಸುಮನಸಪ್ರೀತ || 2 ||

ವರದ ಶ್ರೀರಾಮನ ಚರಣಸ್ಮರಣೆಯೆನ್ನ

ಹೃದಯದಿ ಸ್ಥಿರಗೈ ಕರಿಮುಖ ಸ್ಮರಿಸುವೆ || 3 ||