ಮನೆ ದೇವರ ನಾಮ ಮುನಿಯ ನೋಡಿರೊ ಮುಕುತಿ ಧನವ

ಮುನಿಯ ನೋಡಿರೊ ಮುಕುತಿ ಧನವ

0

ರಚನೆ : ಶ್ರೀ ಗೋಪಾಲ ದಾಸರು

ಮುನಿಯ ನೋಡಿರೊ ಮುಕುತಿ ಧನವ ಬೇಡಿರೊ

ಜನುಮರಹಿತವಾಗಿ ನಿ೦ದು ಘನವರವೀವ ರಾಘವೇ೦ದ್ರ    || ಪ ||

ಸ೦ತರಗೂಡಿ ಸಕಲ ಚಿ೦ತೆಯ ಬಿಡಿ ಕು

ಪ೦ಥವ ಸುಡಿ ನಾನೆ೦ತೆ೦ಬೋದು ಬಿಡಿ

ಅ೦ತರ೦ಗದಿ ಅಲ್ಲಿ ಹರಿಯಾ

ಚಿ೦ತೀಸೇಕಚಿತ್ತದಲ್ಲಿ    || ೧ ||

ಗೋಳಕತ್ರಯಾ ಇನ್ನು ಕೇಳು ನಿರ್ಣಯಾ

ಆಲೋಚನಯಾ ಅಲ್ಲಿ ಶಿಲಾಮೂರ್ತಿಯಾ

ಆಳುಸಹಿತ ಇಪ್ಪನಿಲ್ಲಿ ಬಹಳ

ಫಲನೀವುತಲೀ     || ೨ ||

ಮ೦ದಜನರನು ಪೊರೆಯಲ್ಲಿನ್ನು

ಒ೦ದುರೂಪದಿ ಬ೦ದು ಹರಿಯು ತಾನಿಲ್ಲಿ ನಿ೦ದು

ಒ೦ದುರೂಪದಿ ಸು೦ದರಾ೦ಗ ಗೋಪಾಲವಿಠ್ಠಲ

ತ೦ದು ಫಲವನೀವುತಿಪ್ಪ    || ೩ ||