ಮನೆ ಉದ್ಯೋಗ ಎಂಎಸ್ ​ಐಎಲ್​ ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಎಂಎಸ್ ​ಐಎಲ್​ ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಮೈಸೂರು ಸೇಲ್ಸ್ ಇಂಟರ್‌ ನ್ಯಾಶನಲ್ ಲಿಮಿಟೆಡ್ ​ನ ಸಹಾಯಕ ವ್ಯವಸ್ಥಾಪಕರು, ಕ್ಲರ್ಕ್ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

Join Our Whatsapp Group

ಈ ಹಿಂದೆ ಜುಲೈ 31 ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಇದೀಗ ಅಂತಿಮ ದಿನಾಂಕವನ್ನು ಆಗಸ್ಟ್​ 7ರವರೆಗೆ ರವರೆಗೆ ಮುಂದೂಡಲಾಗಿದೆ. ಅದರಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್​ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

ಸಂಸ್ಥೆಯ ಹೆಸರು : ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (MSIL)

ಹುದ್ದೆಗಳ ಸಂಖ್ಯೆ: 72

ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ

ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು, ಕ್ಲರ್ಕ್

ಹುದ್ದೆಗಳ ಸಂಖ್ಯಾ ವಿವರಗಳು:

ಸಹಾಯಕ ವ್ಯವಸ್ಥಾಪಕರು- 23 ಹುದ್ದೆಗಳು

ಮಾರಾಟ ಮೇಲ್ವಿಚಾರಕ- 19 ಹುದ್ದೆಗಳು

ಸೇಲ್ಸ್ ಇಂಜಿನಿಯರ್- 4 ಹುದ್ದೆಗಳು

ಅಕೌಂಟ್ಸ್ ಕ್ಲರ್ಕ್- 6 ಹುದ್ದೆಗಳು

ಕ್ಲರ್ಕ್​​- 14 ಹುದ್ದೆಗಳು

ಮಾರಾಟ ಪ್ರತಿನಿಧಿ- 6 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಸಹಾಯಕ ವ್ಯವಸ್ಥಾಪಕರು- ಪದವಿ , M.Sc, MBA, ಸ್ನಾತಕೋತ್ತರ ಪದವಿ, CA ಅಥವಾ ICWA ಮಾಡಿರಬೇಕು.

ಮಾರಾಟ ಮೇಲ್ವಿಚಾರಕ- ಪದವೀಧರರಾಗಿರಬೇಕು.

ಸೇಲ್ಸ್ ಇಂಜಿನಿಯರ್- ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ ಮಾಡಿರಬೇಕು.

ಅಕೌಂಟ್ಸ್ ಕ್ಲರ್ಕ್- ಅರ್ಥಶಾಸ್ತ್ರ/ಗಣಿತದಲ್ಲಿ ಬಿ.ಕಾಂ, ಬಿಬಿಎ ಮಾಡಿರಬೇಕು.

ಕ್ಲರ್ಕ್​- ಪದವೀಧರರಾಗಿರಬೇಕು.

ಮಾರಾಟ ಪ್ರತಿನಿಧಿ- ಪದವೀಧರರಾಗಿರಬೇಕು.

ವಯೋಮಿತಿ:

ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

SC/ST/Cat-I ಅಭ್ಯರ್ಥಿಗಳು: 05 ವರ್ಷಗಳು

Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಶುಲ್ಕ:

PWD & ಎಕ್ಸ್​-ಸರ್ವೀಸ್​ ಮ್ಯಾನ್ ಅಭ್ಯರ್ಥಿಗಳು: ರೂ.250/-

SC/ST ಮತ್ತು Cat-I ಅಭ್ಯರ್ಥಿಗಳು: ರೂ.750/-

ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳು: ರೂ.1000/-

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-ಆಗಸ್ಟ್-2023

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್‌ ಸೈಟ್: msilonline.com