ಮನೆ ದೇವರನಾಮ ಜಯ ಗಣೇಶ ಜಯ ಗಣೇಶ                   

ಜಯ ಗಣೇಶ ಜಯ ಗಣೇಶ                   

0

ಗಣೇಶ ನಿನ್ನ ಮಹಿಮೆ ಅಪಾರ |

ಗಣೇಶ ನಿನ್ನ ಶಕ್ತಿಅಪಾರ |

ಭಕ್ತ ವತ್ಸಲಾ…. ಕರುಣಾಸಾಗರ |

ರಕ್ಷಿಸು ರಕ್ಷಿಸು ವಿಜ್ಞೇಶ್ವರ |

ಜಯಗಣೇಶ  ಜಯಗಣೇಶ  ಜಯಗಣೇಶ ರಕ್ಷಿಸು|

ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು |   

ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ|

ನೀ ವಿಘ್ನಗಳನ್ನು ನಾಶ ಮಾಡಿ ನೀಗು ನಮ್ಮ ಚಿಂತೆಯ |

ಕಷ್ಟಗಳನ್ನು ನುಂಗಿ ಬೇಗ ಸುಖದ ದಾರಿ ತೋರಿಸೂ….ಆ….ಆ  |

ಕಷ್ಟಗಳನ್ನು ನುಂಗಿ ಬೇಗ ಸುಖದ ದಾರಿ ತೋರಿಸು|  ನೋವಾ ನೀಗಿ ಬಾಳಿನಲ್ಲಿ ನೆಮ್ಮದಿಯನ್ನು ಕರುಣಿಸು ||ಜಯ ಗಣೇಶ ||             

ಕಂಗಳಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲೀ ಕಿವಿಗಳಲ್ಲಿ ದಿನವೂ ನಿನ್ನ ಕೀರ್ತಿ ತುಂಬಿ ಹರಿಯಲಿ ||

ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ ||

  ನಿನ್ನಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ||

ಜಯ ಗಣೇಶ….ಜಯ  ಜಯ  ಜಯ ಗಣೇಶಾ…..|  ಜಯ  ಜಯ ಜಯ ಗಣೇಶಾ