ಮನೆ ಅಪರಾಧ ಸರಣಿ ಅಪಘಾತ: ರಸ್ತೆ ಬಿಟ್ಟು ಅಂಗಡಿಗಳಿಗೆ ನುಗ್ಗಿದ ವಾಹನಗಳು

ಸರಣಿ ಅಪಘಾತ: ರಸ್ತೆ ಬಿಟ್ಟು ಅಂಗಡಿಗಳಿಗೆ ನುಗ್ಗಿದ ವಾಹನಗಳು

0

ಶಿರಸಿ: ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ವಾಹನಗಳು ರಸ್ತೆ ಬಿಟ್ಟು ಅಂಗಡಿಗಳಿಗೆ ನುಗ್ಗಿದ ಘಟನೆ ತಾಲೂಕಿನ ಬಿಸಿಲಕೊಪ್ಪದಲ್ಲಿ ಇಂದು(ಆ.3) ನಡೆದಿದೆ.

Join Our Whatsapp Group

ಬೊಲೆರೋ ಪಿಕಪ್, ಎನ್.ಡಬ್ಲೂ,ಕೆ.ಎಸ್ .ಆರ್ .ಟಿ.ಸಿ ಬಸ್ ಹಾಗೂ ಮಾರುತಿ ಓಮಿನಿ ನಡುವೆ ಸರಣಿ ಅಪಘಾತವಾಗಿದೆ. ಓಮಿನಿ ಮತ್ತು ಬೊಲೆರೋ ಪಿಕಪ್ ವಾಹನ ರಸ್ತೆ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿದ್ದು, ವಾಹನ ಚಾಲಕರು ಸೇರಿ  ಕೆಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳಗಿಯಿಂದ ಶಿರಸಿಗೆ ಸಾಗುತಿದ್ದ ಪಿಕಪ್ ವಾಹನ ಹಾಗೂ ಓಮಿನಿ ಶಿರಸಿಯಿಂದ ಹಾವೇರಿಗೆ ಸಾಗುತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದ್ದು, ಈ  ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.