ಮನೆ ದೇವರನಾಮ ನಿಂತಾನ ಮನದಲಿ ಬಂದು ಗಣಪತಿ

ನಿಂತಾನ ಮನದಲಿ ಬಂದು ಗಣಪತಿ

0

ನಿಂತಾನ…ನಿಂತಾನ ಮನದಲಿ ಬಂದು ಗಣಪತಿಯು ಹೊಸತನದ ಹೊಸ ಮನದಲಿ ಜಾಗೃತನಾಗಿ ನಿಂತಾನ ||

ಚತುರ್ಭುಜನು ಮೋದಕ ಹಸ್ತನು ಸುಂದರ ರೂಪದ ವದನವುಮ  ಮೋದಕ ಪ್ರಿಯ ಮೂಷಕ ವಾಹನ ಸರ್ವ ದೋಷ ಕಳೆಯಲು ಬಂದಾನ ನಿಂತಾನ ನಿಂತಾನ ||

ಸುತ್ತ ಮುತ್ತಲಿನ ಭಕ್ತರಿಗೆ.. ಅಭಯವು ನೀಡುತ ನಿಂತಾನ  ಚಂದದ ಕಿರೀಟ ಧರಿಸ್ಯಾನ ಬೇಡಿದ ವರವ ನೀಡ್ಯಾವ ನಿಂತಾನ ನಿಂತಾನ ||

ಪಂಚ ಕಜ್ಜಾಯ ಪ್ರಿಯನಮ್ಮ ಸುಂದರ ಮೂರುತಿ ಗಜಾನನ ಭರದಿಂದ ಭಾಗ್ಯವ ನೀಡುತ ಜಾಹ್ನವಿ ವಿಠ್ಠಲನ ಸ್ಮರಿಸುತ ನಿಂತಾನ ನಿಂತಾನ ||