ಮನೆ ಆರೋಗ್ಯ ಕೊರೊನಾ: 975 ಹೊಸ ಪ್ರಕರಣ ಪತ್ತೆ

ಕೊರೊನಾ: 975 ಹೊಸ ಪ್ರಕರಣ ಪತ್ತೆ

0

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 975 ಹೊಸ ಕೋವಿಡ್‌ ಪ್ರಕರಣಗಳು ಮತ್ತು ನಾಲ್ಕು ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದೇ ಅವಧಿಯಲ್ಲಿ 796 ಮಂದಿ ಚೇತರಿಕೆ ಕಂಡಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 11,366 ಆಗಿದೆ. ಇನ್ನು ಈ ವರೆಗೆ ಕೋವಿಡ್‌ನಿಂದ 5,21,747 ಮಂದಿ ಮೃತಪಟ್ಟಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇಕಡಾ 2ಕ್ಕಿಂತ ಹೆಚ್ಚಾಗಿದ್ದು, ಕಳೆದೊಂದು ವಾರದಲ್ಲಿ ಮನೆಯಲ್ಲಿ ಕ್ವಾರಂಟೈನ್ ಆಗಿರುವವರ ಸಂಖ್ಯೆ ಶೇಕಡಾ 48ರಷ್ಟಿದೆ ಎಂದು ಸರ್ಕಾರದ ದತ್ತಾಂಶಗಳು ತಿಳಿಸಿವೆ.ಶುಕ್ರವಾರ ಒಂದೇ ದಿನ 366 ಕೋವಿಡ್ ಪ್ರಕರಣಗಳು ಪತ್ತೆಯಾಗಿ, ಪಾಸಿಟಿವಿಟಿ ದರವು ಶೇಕಡಾ 3.95ಕ್ಕೆ ಏರಿತು. ಇನ್ನು ಸೋಂಕಿಗೆ ತುತ್ತಾಗಿ 574 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.