ಗುರು ನೀನೋಬ್ಬನಿದ್ದರೆ ಸಾಕು |
ದಾರಿ ತನಗಾಗಿ ಬೆಳಗುವುದು ಬೆಳಕು || ಪ
ಇರಲಿ ನಿನ್ನ ಕೃಪೆ ಈ ಜೀವನಕ್ಕೆ |
ಬರಲಿ ನಿನ್ನ ಧ್ಯಾನ ನಿಜ ಮನಕ್ಕೆ |
ಕರುಣೆಯ ಕಡಲು ನಿನ್ನ ಒಡಲು |
ನಿರುತನ ಇರಲಿ, ನಿನಗೆ ನನ್ನಮಡಿಲು ||
ನಿನ್ನ ಸ್ಮರಣೆಯು ನನಗೆ ಆಗಾದ ಶಕ್ತಿ |
ನಿನ್ನ ಸುತ್ತಿಸಿ ಬಾಳಲು ದೊರೆಯುವುದು ಮುಕ್ತಿ|
ಜನ್ಮ ಜನ್ಮಗಳ ಪಾಪ ಪರಿಹಾರ |
ಕರ್ಮಗಳಿಂದ ನಾನು ಬಹು ದೂರ ||
ಸತತ ಬೇಕು ನಿನ್ನ ಸಂಗ ನನಗೆ |
ಪತಿತೋಧ್ಧಾರಿಯೇ ರಕ್ಷಿಸು ನಮಗೆ |
ಪರಿಹರಿಸುವ ಅಜ್ಞಾನದ ಕತ್ತಲೆ |
ಬೆಳಗಿಸು ಜಹ್ನವಿ ವಿಠ್ಠಲ ಜ್ಞಾನ ಸಲೆ.||