ಮನೆ ಅಪರಾಧ ಸಂಗೀತ ವಿ.ವಿ–ಆಮರಣಾಂತ ಉಪವಾಸ ಇಂದಿನಿಂದ

ಸಂಗೀತ ವಿ.ವಿ–ಆಮರಣಾಂತ ಉಪವಾಸ ಇಂದಿನಿಂದ

0

ಮೈಸೂರು: ಬಾಕಿ ವೇತನ ಪಾವತಿಸಿ, ಕೆಲಸದಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ತಾತ್ಕಾಲಿಕ ಬೋಧಕೇತರ ನೌಕರರು ಏ.18ರಿಂದ (ಸೋಮವಾರ) ಆಮರಣಾಂತ ಉಪವಾಸ ಆರಂಭಿಸಲಿದ್ದಾರೆ.‌

ನ್ಯಾಯಕ್ಕಾಗಿ ಆಗ್ರಹಿಸಿ 55 ದಿನಗಳಿಂದ 19 ನೌಕರರು ವಿಶ್ವವಿದ್ಯಾಲಯ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

‘12 ತಿಂಗಳಿಂದ ವೇತನ ಪಾತಿಸಿಲ್ಲ. ನಮ್ಮ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ರಾತ್ರಿಯೂ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ನಮಗೆ ಏನಾದರೂ ಅನಾಹುತವಾದರೆ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಹಾಗೂ ಸರ್ಕಾರವೇ ನೇರ ಹೊಣೆ’ ಎಂದು ವಿಶ್ವವಿದ್ಯಾಲಯದ ಬೋಧಕೇತರ ನೌಕರರ ಸಂಘದ ಕಾರ್ಯದರ್ಶಿ ಕೆ.ಎಚ್‌.ಹನುಮಂತರಾಜು ಎಚ್ಚರಿಕೆ ನೀಡಿದರು.