ಮನೆ ರಾಜ್ಯ ಗದಗ: ವಿಷಪೂರಿತ ಆಹಾರ ಸೇವಿಸಿ ನೂರಾರು ಕುರಿಗಳ ಸಾವು

ಗದಗ: ವಿಷಪೂರಿತ ಆಹಾರ ಸೇವಿಸಿ ನೂರಾರು ಕುರಿಗಳ ಸಾವು

0

ಗದಗ: ವಿಷ ಪೂರಿತ ಆಹಾರ ಸೇವಿಸಿ ನೂರಾರು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದಲ್ಲಿ ನಡೆದಿದೆ.

ಬಿಡನಾಳ ಗ್ರಾಮದ ಕುರಿಗಾಯಿಗಳಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಕುರಿಗಳ ಸಾವು ಕಂಡು ಕುರಿಗಾಯಿಗಳ ಆಕ್ರಂದನ ಮುಗಿಲುಮುಟ್ಟಿದೆ.

ಹಗಲು ರಾತ್ರಿ ಎನ್ನದೆ ಸಾಕಿ ಸಲಹಿದ ಕುರಿಗಳು ಸಾವನ್ನಪ್ಪಿದ್ದು,  ಕುರಿಗಳ ಸಾವಿನಿಂದಾಗಿ ಕುರಿಗಾಯಿಗಳ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಸರ್ಕಾರ ಕುರಿಗಳ ಸಾವಿಗೆ ಪರಿಹಾರ ನೀಡಬೇಕೆಂದು ಕುರಿಗಾಯಿಗಳ ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಪಶುವೈದ್ಯರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.