ಮನೆ ಕ್ರೀಡೆ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಲಕ್ನೋ ಸೂಪರ್ ಗೈಂಟ್ಸ್ ಮ್ಯಾಚ್ ಇಂದು

ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಲಕ್ನೋ ಸೂಪರ್ ಗೈಂಟ್ಸ್ ಮ್ಯಾಚ್ ಇಂದು

0

ಬೆಂಗಳೂರು: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಗೈಂಟ್ಸ್ ಇಂದು ಮುಖಾಮುಖಿ ಆಗಲಿವೆ.

ಎರಡೂ ತಂಡಗಳು ತಲಾ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದು, ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಈ ತಂಡಗಳು ತಮ್ಮ ಅಭಿಯಾನ ಮುಂದುವರಿಸುವ ಗುರಿಯೊಂದಿಗೆ ಅಖಾಡಕ್ಕಿಳಿಯುತ್ತಿವೆ.

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಗೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಜಯ ಸಾಧಿಸಿದ್ದು, ಫುಲ್ ಜೋಶ್ ನಲ್ಲಿದೆ.

ಲಕ್ನೋ ಸೂಪರ್ ಗೈಂಟ್ಸ್ ತಂಡದಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿ ಗಮನ ಸೆಳೆದಿದ್ದು, ಅವರ ಭರ್ಜರಿ ಫಾರ್ಮ್ ಬಲವಾಗಿದ್ದರೆ, ಆರ್ ಸಿಬಿ ತಂಡದ ಗೆಲುವಿನಲ್ಲಿ ದಿನೇಶ್ ಕಾರ್ತಿಕ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.