ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಮೊದಲ ರಾತ್ರಿ ಗಂಡ ಪೌರುಷ ಹಂಚಿಕೊಳ್ಳುತ “ಬೇಕಾದರೆ ಪ್ರಮಾಣ ಮಾಡಿ ಹೇಳ್ತೀನಿ. ನಾನು ಇದುವರೆಗೆ ಯಾವುದೇ ಹೆಣ್ಣಿನ ಜೊತೆ ಸಂಬಂಧ ಮಾಡಿಲ್ಲ. ಅಷ್ಟೇಕೆ ಇದುವರೆಗೆ ಯಾವ ಹೆಣ್ಣಿಗೂ ಮುತ್ತು ಕೊಟ್ಟಿಲ್ಲ. ನೀನು ?” ಕೇಳಿದ.

ಹೆಂಡತಿ ಸಣ್ಣಗೆ ನಡುಗಿದಳು ತಕ್ಷಣ ಚೇತರಿಸಿಕೊಂಡು “ನಾನು ಅಷ್ಟೇ, ಇದುವರೆಗೆ ಯಾವುದೇ ಹೆಣ್ಣಿಗೆ ಮುತ್ತು ಕೊಟ್ಟಿಲ್ಲ.

***

ಆತ : ಕುಡಿತದಿಂದ ನೀನು ಸುಂದರವಾಗಿ ಕಾಣುತ್ತಿದ್ದೀಯ ?

ಆಕೆ : ನಾನು ಕುಡಿದಿಲ್ಲ.

ಆತ : ಆದರೆ ನಾನು ಕುಡಿದಿದ್ದೇನೆ..

***

ಲೀಲ : ಬಾಸ್ ಯಾಕೆ ನಿನ್ನ ಮೇಲೆ ಅಷ್ಟೊಂದು ರೇಗ್ತಾ ಇದ್ರೂ.

ರಾಗಿಣಿ : ನೆನ್ನೆ ರಾತ್ರಿ ನನ್ನನ್ನ ಅವರ ಫಾರಮ್ ಹೌಸ್ ಗೆ ಬಾ ಅಂದಿದ್ರು, ನಾನು ಉಪಾಯ ಮಾಡಿ ಅವರ ಹೆಂಡ್ತಿನೇ ಕಳಿಸಿ ಬಿಟ್ಟಿದ್ದೇನೆ ಅದಕ್ಕೆ.

***

ಬರೆದಂತೆ ನಡೆಯುವುದು ಸಾಧ್ಯವಿಲ್ಲ ಏಕೆಂದರೆ ಬರೆಯುವುದು ಕೈಯಲ್ಲಿ ಆದರೆ ನಡೆಯುವುದು ಕಾಲಲ್ಲಿ…….

***

ಜಗ್ಗುವನ್ನು ಮಧ್ಯರಾತ್ರಿ ಬಡಿದೆಬ್ಬಿಸಿದ ಅವನ ಹೆಂಡತಿ,

ಹೆಂಡತಿ: ರಿ  ನಮ್ಮನೆಗೆ ಕಳ್ಳ ನುಗಿದ್ದಾನೆ. ಅಡುಗೆ ಮನೆಯಲ್ಲಿ ನಾನು ಮಾಡಿದ ದೋಸೆ ತಿಂತಾ ಇದ್ದಾನೆ ಸೌಂಡ್ ಆಗ್ತಾ ಇದೆ. ಕೇಳಿಸ್ತಿದ್ಯಾ ? ಬೇಗ ಫೋನ್ ಮಾಡಿ.

ಜಗ್ಗು : ಯಾರಿಗೆ ಫೋನ್ ಮಾಡೋದು ಪೊಲೀಸರಿಗೋ ? ಅಂಬುಲೆನ್ಸಿಗೋ ?

***

ರಮೇಶ : ಯಾಕೋ ಕೇಶವ, ನೀನು ಇನ್ನು ಮದುವೆ ಮಾಡಿಕೊಂಡಿಲ್ಲ ?

ಕೇಶವ : ನನಗೆ ಅನುರೂಪಳದ ಹುಡುಗಿ ಸಿಕ್ಕಿಲ್ಲ.

ರಮೇಶ : ಅನುರೂಪಾ ಅಂದರೆ ?

ಕೇಶವ : ರೂಪ, ಗುಣ, ವಿದ್ಯೆ ಎಲ್ಲದರಲ್ಲೂ ನನಗೆ ಸರಿಸಾಮಾನ ಆಗಿರಬೇಕು.

ರಮೇಶ : ಆದರೆ ವಿರುದ್ಧ ಗುಣ ಇರುವ ದಂಪತಿಗಳೆ ಸುಖ ಸಂಸಾರ ಮಾಡ್ತಾರಂತ ಹೇಳುತ್ತಾರೆ.

 ಕೇಶವ : ಹೌದ, ಹಾಗಿದ್ದರೆ ರೂಪ, ಗುಣ, ವಿದ್ಯೆ ಹೇಗಾದರೂ ಇರಲ್ಲಿ ತುಂಬಾ ಶ್ರೀಮಂತರಾದ ಹುಡುಗಿ ನಾನು ಮದುವೆ ಆಗಬೇಕಾಗುತ್ತದೆ.