ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಕವಿಯೊಬ್ಬ ಅನೇಕ ಕವನಗಳನ್ನು ಪತ್ರಿಕೆಗೆ ಕಳಿಸಿದ. ಸಂಪಾದಕ ಓದಲು ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ. ಅಕ್ಷರ ಕೆಟ್ಟದಾಗಿ ಇದ್ದವು. ಕವಿಗೆ ಕಾಗದ ಬರೆದ..

 “ನಿಮ್ಮ ಹಸ್ತಪ್ರತಿ ಒದಲು ಕಷ್ಟ. ಆದ್ದರಿಂದ, ಅದನ್ನು ಟೈಪ್ ಮಾಡಿ ಕಳುಹಿಸಿ ಪರಿಶೀಲಿಸುತ್ತೇನೆ.”

ಕವಿ ತಕ್ಷಣ ಉತ್ತರ ಬರೆದ “ ಟೈಪ್ ಮಾಡಲು ಬರುತ್ತಿದ್ದರೆ ನಾನು ಕವಿತೆ ಬರೆದು ಸಂಪಾದಿಸಬೇಕಾದ ಅವಶ್ಯಕತೆ ಎಲ್ಲಿತ್ತು?

***

ರಘು : ಯಾರಿಗೂ ಯಾವುದೂ ಶಾಶ್ವತ ಅಲ್ಲ. ಇವತ್ತು ನಮ್ಮತ್ರಇರೋದು, ನಾಳೆ ಇನ್ನೊಬ್ಬರ ಹತ್ರ ಅಂತ ಸುಬ್ಬುಹೇಳಿದ್ದು ನಿಜ ಆಯ್ತು.

ಶರ್ಮ : ಅದು ಹೇಗೆ ?

ರಘು : ಅವನು ನೆನ್ನೆ ತನಕ ಪ್ರೀತಿಸಿದ ಶಾಲಿನಿ ಈಗ ರಂಗನ್ನ ಪ್ರೀತಿಸ್ತಿದ್ದಾಳೆ.

***

ಮ್ಯಾನೇಜರ್ : ನಿಮ್ಮ ದಾಖಲೆಗಳಿಂದ ಕಳೆದ ನಾಲ್ಕು ತಿಂಗಳಲ್ಲಿ ನೀವು ಆರು ಕಡೆ ನೌಕರಿ ಮಾಡಿರುವಿರಿ ಎಂದು ತಿಳಿದುಬರುತ್ತದೆ.

ಅಭ್ಯರ್ಥಿ : ಆದ್ದರಿಂದಲೇ ನನಗೆ ಬೇಡಿಕೆ ಎಷ್ಟಿದೆ ಎಂದು ತಾವು ತಿಳಿಯಬಹುದಲ್ಲ!

***

ಜಗ್ಗು ಬಾಲುವನ್ನು ತನ್ನ ಹೊಲಕ್ಕೆ ಕರೆದುಕೊಂಡು ಹೋದ.

ಬಾಲು : ಇದೇನೋ ಬೆಳೆ?

ಜಗ್ಗು : ಇದು ಹತ್ತಿ ಇದರಿಂದಲೇ ಬಟ್ಟೆ ತಯಾರಿಸೋದು.

ಬಾಲು : ಹೌದಾ?.. ಮತ್ತೆ ಪ್ಯಾಂಟು-ಶರ್ಟು ಬೆಳೆಯುವುದು ಯಾವಾಗ?