ಮನೆ ರಾಜ್ಯ ಪರವಾನಗಿ ಇಲ್ಲದೇ ಓಡಿಸುತ್ತಿದ್ದ 15 ಆಟೋ, 1 ಶಾಲಾ ಬಸ್ ವಶಕ್ಕೆ ಪಡೆದ ತುಮಕೂರು ಆರ್​...

ಪರವಾನಗಿ ಇಲ್ಲದೇ ಓಡಿಸುತ್ತಿದ್ದ 15 ಆಟೋ, 1 ಶಾಲಾ ಬಸ್ ವಶಕ್ಕೆ ಪಡೆದ ತುಮಕೂರು ಆರ್​ ಟಿಒ ಅಧಿಕಾರಿಗಳು

0

ತುಮಕೂರು: ಶಿರಾ ಪಟ್ಟಣದಲ್ಲಿ ಪರವಾನಗಿ ಇಲ್ಲದೆ ಓಡಿಸುತ್ತಿದ್ದ 15 ಆಟೋಗಳು ಹಾಗೂ 1 ಶಾಲಾ ಬಸ್ ​ನ್ನು​ ತುಮಕೂರು ಆರ್​ ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇನ್ಶೂರೆನ್ಸ್, ಡಿಎಲ್ ಇಲ್ಲದೇ ವಾಹನ ಓಡಿಸುತ್ತಿದ್ದ ಚಾಲಕರಿಗೆ ಆರ್ ​ಟಿಒ ಇನ್ಸ್​ ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶಾಕ್​ ನೀಡಿದ್ದಾರೆ.

ಬಹಳ ದಿನಗಳಿಂದ ಸಾರಿಗೆ ಇಲಾಖೆಗೆ ಕಣ್ಣುತಪ್ಪಿಸಿ ಈ ವಾಹನಗಳು ಸಂಚರಿಸುತ್ತಿದ್ದವು. ಇದೀಗ ವಶಕ್ಕೆ ಪಡೆದಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.