ಪ್ರಭೋ ಮಂಜುನಾಥ ನಿನಗೆ ಸುಪ್ರಭಾತ |
ಆನಂದ ರೂಪ ಶಾಂತಿ ಸ್ವರೂಪ |
ಪ್ರಭುವೇ ಕಣ್ಣ ತೆರೆಯೊ ಮಂಗಲ ರೂಪ |
ನಮ್ಮಯ ಪಾಪ ನೀಗಲು ಕಣ್ಣ ತೆರೆಯೋ |
ತಂದೆಯೇ ಕಣ್ಣ ತೆರೆಯೋ | 1
ಬಾನಾಡಿಗಳು ಚಿಲಿಪಿಲಿ ಎಂದು |
ಹಾಡಿವೆ ಪ್ರಭಾತ ಗಾನ ನೇತ್ರಾವತಿಯ |
ಅಲೆಗಳು ಇಂದು ಮೀಟಿವೆ |
ಶಾಂತಿಯ ಸ್ಥಾನ ಪ್ರಭೋ ಮಂಜುನಾಥ |
ನಿನಗೆ ಸುಪ್ರಭಾತ | 2
ಭಕ್ತಕೋಟಿಯೂ ಭಕ್ತಿಯಿಂದ |
ಹಾಡಿವೆ ನಿನ್ನಯ ನಾಮ ಹಗಲು |
ರಾತ್ರಿ ಈ ಜಗದ ರಕ್ಷೆಯಲಿ |
ಸಾಲದೆ ನಿನಗೆ ವಿರಾಮ || 3
ಅಣ್ಣಪ್ಪ ಸ್ವಾಮಿಯ ಸೇವೆ ಸ್ವೀಕರಿಸಿ |
ತೋರು ನಿನ್ನ ಪ್ರೇಮ ನೀನು |
ನಿಂತಿಹ ಪುಣ್ಯಾ ಸ್ಥಳವಿದೆ ನಿತ್ಯಶಾಂತಿಧಾಮ || ಪ್ರಭೋ ||