ಮನೆ ಯೋಗಾಸನ ಚಿತ್ತವೃತ್ತಿ (ಮನಸ್ಸಿನ ರೂಪಾಂತರಗಳಿಗೆ ಕಾರಣ)

ಚಿತ್ತವೃತ್ತಿ (ಮನಸ್ಸಿನ ರೂಪಾಂತರಗಳಿಗೆ ಕಾರಣ)

0

ಪತಂಜಲಿಯು ತನ್ನ ಯೋಗಸೂತ್ರಗಳಲ್ಲಿ ಸುಖ ಮತ್ತು ದುಃಖಗಳನ್ನು ತರುವ ಐದು ರೀತಿಯ ಚಿತ್ತವೃತ್ತಿಗಳನ್ನು ಪಟ್ಟಿ ಹಾಕಿದ್ದಾನೆ ಅವು ಯಾವುದೆಂದರೆ…….

Join Our Whatsapp Group

೧. ಪ್ರಯಾಣ – ಒಂದು ಅಳತೆ ಅಥವಾ ಆದರ್ಶ. ಇದರ ಆಧಾರದಿಂದ ವಸ್ತುಗಳನ್ನ ಅಥವಾ ಮೌಲ್ಯಗಳನ್ನು ಮನಸ್ಸು ಅಳೆಯುತ್ತದೆ ಅಥವಾ ತಿಳಿದುಕೊಳ್ಳುತ್ತದೆ. ಇದನ್ನು (ಅ) ಪ್ರತ್ಯಕ್ಷ – ಎಂದರೆ ಇಂದ್ರಿಯ ಗೋಚರದಿಂದ, (ಆ) ಅನುಮಾನ – ಊಹೆಯಿಂದ ಮತ್ತು (ಇ) ಶ್ರುತಿ ಪ್ರಮಾಣ ಅಥವಾ ಆಗಮ ಎಂದು ಹೇಳುತ್ತಾರೆ.

೨. ವಿಪರ್ಯಯ – (ತಪ್ಪು ತಿಳುವಳಿಕೆ) ಪರ್ಯಾಲೋಚನೆಯ ಬಳಿಕ ತಪ್ಪೆಂದು ಗೊತ್ತಾಗುವ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯನ ತಪ್ಪು ಗ್ರಹಿಕೆಯ ಆಧಾರದ ಮೇಲೆ ಮಾಡುವ ವಿಧಾನ ಅಥವಾ ಖಗೋಳ ಶಾಸ್ತ್ರದಲ್ಲಿ ಮೊದಲು ಪ್ರಚಾರದಲ್ಲಿದ್ದ ಸೂರ್ಯನು ಭೂಮಿಯ ಸುತ್ತ ತಿರುಗುತ್ತಾನೆಂಬ ತಿಳುವಳಿಕೆ – ವಿಪರ್ಯಕ್ಕೆ ಉದಾಹರಣೆಗಳು……

೩.ವಿಕಲ್ಪ– (ಕಲ್ಪನೆ, ಮತ್ತು ಆಧಾರವಿಲ್ಲದ ಶಬ್ದ ಗ್ರಹಣದ ಮೇಲೆ ಆಧಾರಗೊಂಡ ಕಲ್ಪನೆ) ಒಬ್ಬ ಭಿಕ್ಷುಕ ತಾನು ಸಹಸ್ರರು ರೂಪಾಯಿ ಹಣವನ್ನು ಖರ್ಚು ಮಾಡುತ್ತೇನೆಂದು ಭಾವಿಸಿ ಸಂತೋಷಪಡುವನು. ಧನಿಕನಾದ ಕೃಪಣನು ತಾನು ಕಡು ಬಡವನೆಂದು ಊಹಿಸಿಕೊಂಡು ಉಪವಾಸ ಬೀಳುವುದು.

೪. ನಿದ್ರಾ – (ಭಾವನೆ ವಿಚಾರ ಅಥವಾ ಅನುಭವಗಳ ಇಲ್ಲದಿರುವಿಕೆ) ಒಬ್ಬನು ಗಾಢವಾಗಿ ನಿದ್ರೆ ಮಾಡುತ್ತಿರುವಾಗ ತನ್ನ ಹೆಸರು, ಕುಲ, ಅಂತಸ್ತು, ಜ್ಞಾನ ಅಥವಾ ತೀಳವಳಿಕೆ ಅಥವಾ ತಾನು ಇದ್ದೇನೆನ್ನುವ ಅರಿವು ಇವೆಲ್ಲವೂ ಮರೆತಿರುತ್ತಾನೆ. ಯಾವನಾದರೊಬ್ಬನು ತನ್ನನ್ನು ತಾನು ನಿದ್ದೆಯಲ್ಲಿ ಮರೆತು ಎದ್ದರೆ ಅವನು ಉಲ್ಲಾಸಗೊಂಡಿರುತ್ತಾನೆ. ಆದರೆ ನಿದ್ದೆ ಹತ್ತುವ ಕಾಲದಲ್ಲಿ ಮನಸ್ಸಿನೊಳಗೆ ಪ್ರತಿಬಂಧಕ ಯೋಚನೆ ಇದ್ದಲ್ಲಿ ಅವನು ಸುಖದಿಂದ ನಿದ್ದೆ ಮಾಡುವುದಿಲ್ಲ.

೫. ಸ್ಮೃತಿ – (ಒಮ್ಮೆ ಅನುಭವ ಬಂದ ವಸ್ತುಗಳ ಛಾಯೆಯನ್ನು ಹಿಡಿದುಕೊಂಡಿರುವುದು) ಕೆಲವರು ಗತಕಾಲದ ನೆನಪುಗಳು ಇಲ್ಲದಿದ್ದರೂ ಗತಕಾಲದ ಅನುಭವದಲ್ಲೇ ಜೀವಿಸುತ್ತಾರೆ. ಅವರ ಸುಖಕರ ಅಥವಾ ದುಃಖಕರ ನೆನಪುಗಳು ಅವರನ್ನ ಗತಕಾಲದೊಡನೆ ನಿಬಂಧಿಸಿದ್ದು ಆದ್ದರಿಂದ ತಪ್ಪಿಸಿಕೊಳ್ಳುವುದಕ್ಕೂ ಅದರ ಹಾಗೆ ಮಾಡುತ್ತವೆ.

* ಪತಂಜಲಿಯು ದುಃಖವನ್ನುಂಟು ಮಾಡುವ 5 ಬಗೆಯ ಚಿತ್ತ ವೃತ್ತಿಗಳನ್ನು ಹೇಳುತ್ತಾನೆ :

೧. ಅವಿದ್ಯಾ. ೨. ಅಸ್ಮಿತಾ (ಒಬ್ಬನ ವ್ಯಕ್ತಿತ್ವವನ್ನು ಸೀಮಿತಗೊಳಿಸುವ, ಇತರರಿಂದ ತಾನು ಬೇರೆ ಎಂದು ತೋರಿಸುವ ಭಾವನೆ. ಇದು ದೈಹಿಕ ಮಾನಸಿಕ ಹಾಗೂ ಭಾವನೆಗೆ ಸಂಬಂಧಪಟ್ಟ ಇರಬಹುದು.) ೩. ರಾಗ (ಆಸಕ್ತಿ ಅಥವಾ ಕಾಮ) ೪. ದ್ವೇಷ  (ಪರಾಜುಖತ್ವ) ಮತ್ತು 5 ಅಭಿನಿವೇಶ  (ಜೀವನದಲ್ಲಿ ಆಸಕ್ತಿ, ಪ್ರಾಪಂಚಿಕ ಜೀವನದೊಡನೆ ಅಂಟಿಕೊಳ್ಳುವ ಸಹಜ ಗುಣ, ದೈಹಿಕ ಸುಖ, ಸಾವಿನಿಂದ ಜೀವನವನ್ನು ಕುದಿಯುವ ಭಯ) ಸಾಧಕನ ಮನಸ್ಸಿನಲ್ಲಿ ದುಃಖದ ಈ ಕಾರಣಗಳು ಬದುಕಿಕೊಂಡಿರುತ್ತದೆ ಮಂಜುಗಡ್ಡೆಗಳಂತೆ ಇರುತ್ತದೆ.. ಅವುಗಳನ್ನ ನಿರೋಧಿಸಿ ದಮನಗೊಳಿಸುವವರೆಗೂ ಶಾಂತಿಯೇ ಇರುವುದಿಲ್ಲ. ಯೋಗಿಯು ಗತಕಾಲವನ್ನು ಮರೆಯಲು ಕಲಿತು, ನಾಳಿನ ಯೋಚನೆ ಇಲ್ಲದೆ ಅನಂತ ವರ್ತಮಾನದಲ್ಲಿಯೇ ಜೀವಿಸುತ್ತಾನೆ.

ಹೇಗೆ ಸರೋವರದ ಅಂಚನ್ನು ಗಾಳಿಯು ಕದಡಿ ಅದರಲ್ಲಿ ಕಾಣುವ ಪ್ರತಿಬಿಂಬಗಳನ್ನು ವಿರೂಪಗೊಳಿಸುತ್ತದೆಯೋ ಹಾಗೆ ಚಿತ್ತವೃತ್ತಿಗಳು ಮನಸ್ಸಿನ ಶಾಂತಿಯನ್ನು ಕದಡುತ್ತದೆ. ಸರೋವರದ ಅಚಲ ನೀರು ಸುತ್ತಮುತ್ತಲಿನ ಸೋಬಗಗಳನ್ನು ಪ್ರತಿಬಿಂಬಿಸುತ್ತದೆ. ಯಾವಾಗ ಮನಸ್ಸು ಸ್ಥಿರವಾಗಿರುತ್ತದೆ ಆಗ ಆತ್ಮದ ಸೊಬಗು ಪ್ರತಿಬಿಂಬಗೊಳ್ಳುತ್ತದೆ. ಯೋಗಿಯು ಸತತ ಅಭ್ಯಾಸದಿಂದ ಮತ್ತು ಆಸೆಗಳಿಂದ ಮುಕ್ತನಾಗುವುದರಿಂದ ಮನಸ್ಸನ್ನು ಸ್ಥಿರಗೊಳಿಸುತ್ತಾನೆ ಅಷ್ಟಾಂಗಯೋಗ ಅದನ್ನು ಹೇಳಿಕೊಡುತ್ತದೆ..