ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೈದ್ಯ : ರಾಜ ಈ ಬಾರಿ ನಿಮಗೇನು ತೊಂದರೆ ಆಗದಂತೆ ಆಪರೇಷನ್ ಮಾಡ್ತೀನಿ, ಅದ್ಸರಿ ಇದೇನು “ಜಿಪ್” ತಂದಿದ್ದೀರಲ್ಲಾ ?  

ರಾಜು : ನೀವು ಪ್ರತಿಸಲ ಆಪರೇಷನ್ ಮಾಡಿದಾಗ್ಲೂ ನನ್ನ ಹೊಟ್ಟೆಯಲ್ಲಿ ಏನಾದ್ರೂ ಬಿಟ್ಟು ಮತ್ತೆ ಅದು ತೆಗೆಯೋಕೆ ಆಪರೇಷನ್ ಮಾಡ್ತಾ ಇರ್ತೀರಿ. ಅದಕ್ಕೆ ಈ ಬಾರಿ ಆಪರೇಷನ್ ಮಾಡಿದಾಗ ಈ ಜಿಪ್ ಹಾಕ್ಬಿಡಿ, ನಿಮಗೂ  ಅನುಕೂಲ ನನಗೂ ಅನುಕೂಲ.

***

ರಾಜು : ಇವತ್ತು ನಾನು ಮೂರು ಗಂಡು ಸೊಳ್ಳೆ, ಮೂರು ಹೆಣ್ಣು ಸೊಳ್ಳೆ, ಹೊಡೆದುಹಾಕ್ದೆ.

ಕಿಟ್ಟು : ಸೊಳ್ಳೆಗಳಲ್ಲಿ ಗಂಡು ಹೆಣ್ಣು ಅಂತ ಅದು ಹೇಗೆ ಗೊತ್ತು ಮಾಡ್ದೆ? 

ರಾಜು : ಅದು ಗೊತ್ತುಮಾಡೋದೆನು ಎಂದಿಲ್ಲ.

ಕಿಟ್ಟು : ಅದೆಂಗೆ ಗೊತ್ತು ಮಾಡಿದೆ ?

ರಾಜು : ಮೂರು ಸೊಳ್ಳೆ ನನ್ನ ಹೆಂಡ್ತಿ ಸೀರೆ ಮೇಲೆ ಕುಳಿತಿದ್ದವು, ಅವು ಹೆಣ್ಣು ಸೊಳ್ಳೆ, ಮೂರು ನನ್ನ ಪ್ಯಾಂಟ್ ಮೇಲೆ ಕೊಡುತ್ತಿದ್ದವು ಅವು ಗಂಡು ಸೊಳ್ಳೆ.

****

ಶಿಕ್ಷಕ : ರಾಜು ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ?

ರಾಜು : ಐ.ಸೆ.ಎಸ್.ಇನ್ ವಿಂಟರ್,ಐ.ಸೆ.ಇಸ್ಿಸ್.ಸಮ್ಮರ್. 

ಶಿಕ್ಷಕ : ಹಾಗಂದ್ರೇನು ಸರಿಯಾಗಿ ಬಿಡಿಸಿ ಹೇಳು.

ರಾಜು : ಹಾಗಂದ್ರೆ, ಪಕೋಡ ಚಾರ್ಟ್ಸ್ ಸೆಲ್ಲರ್ ಇನ್ ವಿಂಟರ್, ಐಸ್ ಕ್ರೀಮ್ ಸೆಲ್ಲರಿಂಗ್ ಇನ್ ಸಮ್ಮರ್.

ಕಿಟ್ಟು : ಇದೇನೋ ರಾಜು ಅಂಗಿ ಮೇಲೆಲ್ಲಾ ಸಾಫ್ಟ್, ಸಾಫ್ಟ್ ಅಂತ ಬರ್ಕೊಂಡಿದ್ದೀಯಾ ?

ರಾಜು : ಹುಡ್ಗೀರ್ಗೆ ಸಾಫ್ಟ್ ವೇರ್ ಹುಡುಗರು ಇಷ್ಟವಾಗ್ತಾರಂತೆ ಅದಕ್ಕೆ.

ರಾಜು : ಬಾಳೆಹಣ್ಣಿಗೆ ಎಷ್ಟು ?

ಅಂಗಡಿಯವ : ಒಂದು ರೂಪಾಯಿ.

ರಾಜು :60 ಪೈಸೆಗೆ ಕೊಡ್ತೀಯ ?

ಅಂಗಡಿಯವ :  60 ಪೈಸೆಗೆ ಸಿಪ್ಪೆ ಮಾತ್ರ ಬರುತ್ತೆ.

ರಾಜು : ಹಾಗಾದ್ರೆ ತಗೋ 40 ಪೈಸೆ ಬಾಳೆಹಣ್ಣು ಕೊಡು, ಸಿಪ್ಪೆ ನೀನೇ ಇಟ್ಕೋ.

****

ಪದ್ಮ : ನಿಮ್ ಮಗ ಮೆಡಿಕಲ್ ಕಾಲೇಜಿನಲ್ಲಿ ಚೆನ್ನಾಗಿ ಓದುತ್ತಾ ಇದ್ದಾನ ?

ಗೀತಾ : ಚೆನ್ನಾಗೆ ಓದುತ್ತಾ ಇದ್ದಾನೆ ಅಂತ ಕಾಣುತ್ತೆ.

ಪದ್ಮ : ಅದು ಹೇಗೆ ಹೇಳ್ತೀರಿ ?

ಗೀತಾ : ಈಚೆಗಂತೂ ಅವನು ಬರೆದ ಕಾಗದ ಓದಕ್ಕೆ ಆಗ್ತಿಲ್ಲ.